ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ನೋಡಿದ್ರೆ ನಿಮಗರಿವಿಲ್ಲದೆಯೇ ನಿಮ್ಮ ಕಣ್ಣಲ್ಲಿ ನೀರು ಜಿನುಗುತ್ತೆ. ಮಕ್ಕಳಿಗೆ ನಾಯಿಮರಿಗಳೆಂದ್ರೆ ವಿಶೇಷ ಪ್ರೀತಿಯಿರುತ್ತದೆ. ತಮ್ಮ ಪೋಷಕರೇನಾದ್ರೂ ಅಚ್ಚರಿಯ ಉಡುಗೊರೆ ಕೊಟ್ರೆ ಅವರು ಯಾವ ರೀತಿ ಪ್ರತಿಕ್ರಿಯೆ ಕೊಡಬಹುದು ಅನ್ನೋದಕ್ಕೆ ಈ ಬಾಲಕನೊಬ್ಬ ಉದಾಹರಣೆಯಾಗಿದ್ದಾನೆ.
ಪೋಷಕರಿಂದ ನಾಯಿಮರಿಯನ್ನು ಅಚ್ಚರಿಯಾಗಿ ಉಡುಗೊರೆ ಪಡೆದ ಆಟಿಸಂನಿಂದ ಬಳಲುತ್ತಿರುವ ಬಾಲಕನ ಕನಸು ನನಸಾಗಿದೆ. ಈ ಸುಂದರ ವಿಡಿಯೋವನ್ನು ವೈರಲ್ ಹಾಗ್ ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದು 50,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.
ಬಾಲಕ ತನ್ನ ಶಾಲೆಯಿಂದ ಮನೆಗೆ ಹಿಂತಿರುಗಿದ್ದಾನೆ. ಈ ವೇಳೆ ಆತನ ತಾಯಿ ಪೆಟ್ಟಿಗೆಯಲ್ಲಿ ಏನೋ ಹಿಡಿದಿರುವುದನ್ನು ನೋಡಿದ್ದಾನೆ. ಪೆಟ್ಟಿಗೆಯನ್ನು ತೆರೆಯುವಂತೆ ಅವನ ತಾಯಿ ಅವನಿಗೆ ಸೂಚಿಸಿದ್ದಾಳೆ. ಪೆಟ್ಟಿಗೆ ತೆರೆದಾಗ ಅದರೊಳಗಿದ್ದ ಪುಟ್ಟ ನಾಯಿಮರಿಯೊಂದು ಹೊರಗೆ ಬಂದಿದೆ. ನಾಯಿಮರಿಯನ್ನು ನೋಡಿದ ಕೂಡಲೇ ಬಾಲಕನಿಗೆ ಸಂತೋಷದಿಂದ ಅಳು ತಡೆಯಲಾಗಲೇ ಇಲ್ಲ. ಅಳುತ್ತಲೇ ಅದ್ಭುತ ಉಡುಗೊರೆ ನೀಡಿದ ತನ್ನ ತಾಯಿಗೆ ಧನ್ಯವಾದ ಹೇಳಿದ್ದಾನೆ. ವಿಡಿಯೋವನ್ನು ನೆಟ್ಟಿಗರು ಸಂಪೂರ್ಣವಾಗಿ ಇಷ್ಟಪಟ್ಟಿದ್ದಾರೆ. ಇದೊಂದು ಅತ್ಯುತ್ತಮ ಉಡುಗೊರೆ ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.