ಜೀವನದಲ್ಲಿ ಒಬ್ಬೊಬ್ಬರಿಗೂ ಒಂದೊಂದು ಆಸೆ ಇರುತ್ತದೆ. ಕೆಲವರಿಗೆ ವಿಚಿತ್ರ ಆಸೆಗಳಿರುತ್ತವೆ. ಇಲ್ಲೊಬ್ಬ ಹುಚ್ಚುಮನಸಿನ ಮಾಜಿ ಪಾದ್ರಿ ತನ್ನ 83 ನೇ ವರ್ಷದ ಪ್ರಾಯದಲ್ಲಿ ಪೋರ್ನ್ ಸ್ಟಾರ್ ಆಗುವ ಉದ್ದೇಶದಿಂದ ತನ್ನ ಪಾದ್ರಿ ಸ್ಥಾನವನ್ನೇ ತೊರೆದಿದ್ದಾನೆ.
ನಾರ್ಮ್ ಸೆಲ್ಫ್ ಎಂಬ ಮಾಜಿ ಪಾದ್ರಿ ಇತ್ತೀಚೆಗೆ ತಮ್ಮ ಮೊದಲ ವಯಸ್ಕರ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಆ ಅನುಭವ ಅತ್ಯಂತ ಆನಂದದಾಯಕವಾಗಿತ್ತು ಎಂದು ತಲೆದೂಗಿದ್ದಾನೆ !
ವರದಿಗಳ ಪ್ರಕಾರ, ನಾರ್ಮ್ ಸೆಲ್ಫ್ ಪಾದ್ರಿಯಾಗಿ ಸೇವೆ ಸಲ್ಲಿಸಿದರು. ದಶಕಗಳ ಹಿಂದೆ ಪಾದ್ರಿ ಕೆಲಸವನ್ನು ತ್ಯಜಿಸಿದ್ದರು. ಈತ ಸಲಿಂಗಕಾಮಿ ಎಂದು ತಿಳಿದ ನಂತರ ವಯಸ್ಕರ ಚಿತ್ರರಂಗಕ್ಕೆ ಪ್ರವೇಶಿಸಿದರು. 2017 ರಲ್ಲಿ ಮೊದಲ ವಯಸ್ಕ ಚಿತ್ರದಲ್ಲಿ ನಟಿಸಿದ್ದರು.
ತನ್ನ 83 ನೇ ವರ್ಷ ಪ್ರಾಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದದ್ದು, ನನ್ನ ಜೀವನದ ಅತ್ಯಂತ ಸುಮಧುರ ಕ್ಷಣವೆಂದು ಬಣ್ಣಿಸಿರುವ ಸೆಲ್ಫ್, ವಯಸ್ಕರ ಚಿತ್ರದಲ್ಲಿ ನಟಿಸುವುದನ್ನು ಮುಂದುವರೆಸುವುದಾಗಿ ಹೇಳಿಕೊಂಡಿದ್ದಾರೆ.
ಅಲ್ಲದೇ, ತನ್ನ ವೈಯಕ್ತಿಕ ಆದ್ಯತೆ ಎಂದರೆ ಮತ್ತೊಬ್ಬ ಪುರುಷನನ್ನು ಲೈಂಗಿಕ ಸಹಪಾಠಿಯನ್ನಾಗಿ ಹೊಂದುವುದಾಗಿದೆ ಎಂದಿದ್ದಾರೆ.