ಎಚ್ಐವಿ ಏಡ್ಸ್ ಗೆ ಇನ್ನೂ ಔಷಧಿ ಬಂದಿಲ್ಲ. ಹಾಗಾಗಿಯೇ ಏಡ್ಸ್ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಜನಸಾಮಾನ್ಯರಿಗಿಂತ ಏಡ್ಸ್ ಭಯ ಪೋರ್ನ್ ಸ್ಟಾರ್ಸ್ ಗೆ ಇರುತ್ತದೆ. ಇದೇ ಕಾರಣಕ್ಕೆ ಪೋರ್ನ್ ಚಿತ್ರಗಳಲ್ಲಿ ನಟಿಸುವ ಕಲಾವಿದರು ಹೆಚ್ಚು ಎಚ್ಚರಿಕೆಯಿಂದಿರುತ್ತಾರೆ.
1980ರ ಸಮಯದಲ್ಲಿ ಪೋರ್ನ್ ಚಿತ್ರಗಳಲ್ಲಿ ನಟಿಸುತ್ತಿದ್ದ ಅನೇಕ ಕಲಾವಿದರು ಏಡ್ಸ್ ನಿಂದ ಸಾವನ್ನಪ್ಪಿದ್ದರು.ಇದಾದ್ಮೇಲೆ ಪೋರ್ನ್ ಕಲಾವಿದರಿಗೆ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಲಾಗಿದೆ. ಪ್ರತಿಯೊಬ್ಬರು ಮಾರ್ಗಸೂಚಿಯನ್ನು ಪಾಲಿಸಬೇಕಾಗಿದೆ.
ತಿಂಗಳಿಗೆ ಎರಡು ಬಾರಿ ಅವ್ರ ಪರೀಕ್ಷೆ ನಡೆಯುತ್ತದೆ. ಎಲ್ಲ ಕಲಾವಿದರು ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕು. ಒಂದು ವೇಳೆ ರೋಗ ಲಕ್ಷಣ ಕಂಡು ಬಂದಲ್ಲಿ ಅವ್ರಿಗೆ ಶೂಟಿಂಗ್ ಗೆ ಅವಕಾಶ ನೀಡಲಾಗುವುದಿಲ್ಲ. ಅವ್ರಿಗೆ ಚಿಕಿತ್ಸೆ ನೀಡಲಾಗುತ್ತದೆ. ಸಾಮಾನ್ಯ ಜನರಿಗಿಂತ ಪೋರ್ನ್ ಸ್ಟಾರ್ಸ್ ಗೆ ಅಪಾಯ ಹೆಚ್ಚು. ಒಂದಕ್ಕಿಂತ ಹೆಚ್ಚು ಜನರ ಜೊತೆ ಶಾರೀರಿಕ ಸಂಬಂಧ ಹೊಂದುವವರಿಗೆ ಏಡ್ಸ್ ಕಾಡುತ್ತದೆ.
ಅಮೆರಿಕಾ ವೆಬ್ಸೈಟ್ ಒಂದರ ಪ್ರಕಾರ ವರ್ಷದಲ್ಲಿ 13 ಸಾವಿರಕ್ಕೂ ಹೆಚ್ಚು ಪೋರ್ನ್ ಚಿತ್ರ ನಿರ್ಮಾಣವಾಗುತ್ತದೆ. 13 ಬಿಲಿಯನ್ ಗಿಂತಲೂ ಹೆಚ್ಚು ಗಳಿಕೆಯಾಗುತ್ತದೆ. ಫುಟ್ಬಾಲ್, ಬಾಸ್ಕೆಟ್ ಬಾಲ್, ಬೇಸ್ಬಾಲ್ ಗಿಂತಲೂ ಹೆಚ್ಚು ಗಳಿಕೆಯನ್ನು ಒಂದು ಪೋರ್ನ್ ಕಂಪನಿ ಮಾಡುತ್ತದೆ ಎನ್ನಲಾಗುತ್ತೆ.