ಶಿಕ್ಷಕರು ತಮ್ಮದೆ ವಿಧಾನದಲ್ಲಿ ಮಕ್ಕಳಿಗೆ ಕಲಿಸ್ತಾರೆ. ಕೆಲವರು ವಿಷ್ಯಕ್ಕೆ ಮಹತ್ವ ನೀಡಿದ್ರೆ ಮತ್ತೆ ಕೆಲವರು ಪ್ರಾಯೋಗಿಕವಾಗಿ ಅಥವಾ ಆಟವಾಡ್ತಾ ಮಕ್ಕಳಿಗೆ ಕಲಿಸ್ತಾರೆ. ಬೋಧನೆ ಯಾವುದೇ ರೀತಿಯಲ್ಲಿರಲಿ, ಮಕ್ಕಳು ಕಲಿಯಬೇಕು ಎಂಬುದು ಎಲ್ಲರ ಉದ್ದೇಶವಾಗಿರುತ್ತದೆ. ತೈವಾನ್ ಶಿಕ್ಷಕನೊಬ್ಬ ಮಕ್ಕಳಿಗೆ ಗಣಿತ ಕಲಿಸುವ ವಿಧಾನ ಭಿನ್ನವಾಗಿದೆ.
ಪುರುಷರ ಲೈಂಗಿಕ ಶಕ್ತಿ ವೃದ್ಧಿಸುತ್ತೆ ಈ ಆಹಾರ
ವಯಸ್ಕರ ಸೈಟ್ ಗೆ ಭೇಟಿ ನೀಡದಂತೆ ಮಕ್ಕಳಿಗೆ ಶಿಕ್ಷಕರು ಸಲಹೆ ನೀಡ್ತಾರೆ. ಆದ್ರೆ ತೈವಾನ್ ನ ಈ ಶಿಕ್ಷಕ, ಪೋರ್ನ್ ಸೈಟ್ ನಲ್ಲಿಯೇ ಮಕ್ಕಳಿಗೆ ಶಿಕ್ಷಣ ಕಲಿಸುತ್ತಾನೆ. ಶಿಕ್ಷಕನ ಹೆಸರು, ಚಾಂಗ್ಸು. ಪೋರ್ನ್ ಸೈಟ್ ನಲ್ಲಿ ಗಣಿತ ಕಲಿಸುವ ಈ ಶಿಕ್ಷಕ ವರ್ಷದಲ್ಲಿ ಸುಮಾರು 2 ಕೋಟಿ ರೂಪಾಯಿ ಗಳಿಸುತ್ತಾನಂತೆ.
ಕಳೆದ 15 ವರ್ಷಗಳಿಂದ ಗಣಿತ ಕಲಿಸುತ್ತಿರುವ ಚಾಂಗ್ಸು, ಮೊದಲು ಆಫ್ಲೈನ್ ಮೂಲಕ ಮಕ್ಕಳಿಗೆ ಪಾಠ ಹೇಳ್ತಿದ್ದ. ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶಿಕ್ಷಕ, ಯೂಟ್ಯೂಬ್‌ನಲ್ಲಿ ಆನ್‌ಲೈನ್ ಕೋರ್ಸ್‌ಗಳಿಗೆ ಸಂಬಂಧಿಸಿದ ವೀಡಿಯೊ ಹಾಕುವ ಶಿಕ್ಷಕ, ಹೆಚ್ಚಿನ ಮಕ್ಕಳು ನೋಡಲಿ ಎಂಬ ಕಾರಣಕ್ಕೆ ಪೋರ್ನ್ ಸೈಟ್ ಮೊರೆ ಹೋಗಿದ್ದಾನೆ. ಇಲ್ಲಿಯವರೆಗೆ 200 ಕ್ಕೂ ಹೆಚ್ಚು ಗಣಿತದ ವೀಡಿಯೊ ಅಪ್ಲೋಡ್ ಆಗಿದೆ.