ಎರಡು ಸಾವಿರ ವರ್ಷಗಳ ಹಿಂದೆ ಭಾರತ ಬ್ರಿಟಿಷ್ ವಸಾಹತುಶಾಹಿಯಾಗಿತ್ತು. ಭಾರತದ ಅಪಾರ ಶ್ರೀಮಂತಿಕೆ ಮೇಲೆ ಕಣ್ಣುಹಾಕಿದ ಅನ್ಯರಾಷ್ಟ್ರಗಳ ಆಕ್ರಮಣಕಾರರು ಇಲ್ಲಿಗೆ ಬಂದೆರಗಿದ್ದು. ವಸಾಹತುಶಾಹಿಗಳ ಆಗಮನದ ಬೆನ್ನಲ್ಲೇ ಭಾರತದಲ್ಲೂ ಶೂರರು ವೀರರ ಉದಯವಾಯಿತು. ಶತ್ರುಗಳನ್ನು ಸೆದೆಬಡಿಯಬಲ್ಲ ಸಮರ್ಥ ಹೋರಾಟಗಾರರು ಸೃಷ್ಟಿಯಾದರು. ಅವರಲ್ಲೊಬ್ಬರು ದಕ್ಷಿಣ ಕನ್ನಡ ಜಿಲ್ಲೆ ಉಲ್ಲಾಳದ ಸ್ವಾತಂತ್ರ್ಯ ಹೋರಾಟಗಾರ್ತಿ, ರಾಣಿ ಅಬ್ಬಕ್ಕ.
16ನೇ ಶತಮಾನದಲ್ಲಿ ರಾಣಿ ಅಬ್ಬಕ್ಕ ಮೊದಲು ಎದುರಿಸಿದ್ದು ಪೋರ್ಚುಗೀಸರನ್ನು. ಭಾರತದ ದಕ್ಷಿಣ ಕರಾವಳಿಯಲ್ಲಿ ಪೋರ್ಚುಗೀಸರ ಸಾಮ್ರಾಜ್ಯಶಾಹಿ ದುರ್ವರ್ತನೆಯನ್ನು ಆಗ ವಿರೋಧಿಸುವವರೇ ಇರಲಿಲ್ಲ. ಪರಿಣಾಮ ಅಲ್ಲಿಯೇ ಅವರು ತಮ್ಮ ಮಸಾಲೆ ವ್ಯಾಪಾರವನ್ನು ವಿಸ್ತರಿಸಿದ್ದರು. ಪೋರ್ಚುಗೀಸರು ಕರಾವಳಿಯ ಆಚೆಗೆ ನುಸುಳಲು ಸಾಧ್ಯವಾಗಲಿಲ್ಲ, ಏಕೆಂದರೆ ಉಳ್ಳಾಲದಲ್ಲಿ ಅಬ್ಬಕ್ಕ ತಮ್ಮ ಪ್ರದೇಶಕ್ಕೆ ಕಾವಲುಗಾರರಾಗಿದ್ದರು.
ರಾಣಿ ಅಬ್ಬಕ್ಕ ಬೆಳೆದಿದ್ದೆಲ್ಲ ಮೂಡಬಿದ್ರೆಯಲ್ಲಿ. ಮಂಗಳೂರಿನ ರಾಜನಾಗಿದ್ದ ಲಕ್ಷ್ಮಪ್ಪ ಬಂಗರಾಜನೊಂದಿಗೆ ಆಕೆಯ ವಿವಾಹವಾಗಿದ್ದು. ಪೋರ್ಚುಗೀಸರು ಹೇರುತ್ತಿದ್ದ ವಿಪರೀತ ತೆರಿಗೆ ವಿರುದ್ಧ ಹೋರಾಡುವಂತೆ ಪತಿಗೆ ಅಬ್ಬಕ್ಕ ಪ್ರೇರಣೆ ನೀಡುತ್ತಿದ್ದರು. ಆದ್ರೆ ಅಂತಿಮವಾಗಿ ಬಂಗರಾಜ ಸೋಲೊಪ್ಪಿಕೊಳ್ಳಬೇಕಾಯ್ತು. ನಂತರ ಅಬ್ಬಕ್ಕ ಉಳ್ಳಾಲಕ್ಕೆ ಸ್ಥಳಾಂತರಗೊಂಡರು. ಉಳ್ಳಾಲದ ಮೇಲೆ ಕಣ್ಣು ಹಾಕಿದ ಪೋರ್ಚುಗೀಸರು ಅಲ್ಲಿಯೂ ತೆರಿಗೆ ದರ್ಬಾರ್ ಶುರುವಿಟ್ಟುಕೊಂಡರು.
ಆದ್ರೆ ಅದಕ್ಕೆ ಅಬ್ಬಕ್ಕ ಬಗ್ಗಲಿಲ್ಲ. ತಮ್ಮ ಸೇನೆಯನ್ನು ಇನ್ನಷ್ಟು ಬಲಪಡಿಸಿಕೊಂಡರು. ಈ ಸಮಯದಲ್ಲಿ ಉಳ್ಳಾಲದ ಸೋಮನಾಥ ದೇವಾಲಯ ರಾಣಿಯ ಕಾರ್ಯಸ್ಥಾನವಾಗಿತ್ತು. ಪೋರ್ಚುಗೀಸರ ಹಗಡನ್ನೇ ನಾಶ ಮಾಡಿದ ಅಬ್ಬಕ್ಕ, ತಮ್ಮ ಸೇನೆಯೊಂದಿಗೆ ಸಾಕಷ್ಟು ಬಾರಿ ದಾಳಿ ಮಾಡಿದ್ರು. ಈ ಚಕಮಕಿಯಲ್ಲಿ ಪೋರ್ಚುಗೀಸರು ಉಳ್ಳಾಲಕ್ಕೆ ಭಾರೀ ನಷ್ಟ ಉಂಟು ಮಾಡಿದ್ದರು. 1581ರಲ್ಲಿ ಪೋರ್ಚುಗೀಸರಿಗೆ ತೆರಿಗೆ ಕೊಡಲು ಅಬ್ಬಕ್ಕ ನಿರಾಕರಿಸಿದ್ದರು.
3000 ಸೈನಿಕರೊಂದಿಗೆ ಪೋರ್ಚುಗೀಸರು ಉಳ್ಳಾಲದ ಮೇಲೆ ದಾಳಿ ಮಾಡಿದರು. ಹಡಗನ್ನು ನಾಶ ಮಾಡಿದ್ರು. ಗ್ರಾಮವನ್ನೆಲ್ಲ ಲೂಟಿ ಹೊಡೆದಿದ್ದಲ್ಲದೆ, ಅಬ್ಬಕ್ಕ ತಂಗಿದ್ದ ಅರಮನೆಗೂ ಬೆಂಕಿಯಿಟ್ಟರು. ಈ ವೇಳೆ ಅಬ್ಬಕ್ಕನ ತಲೆಗೇ ತೀವ್ರ ಗಾಯವಾಗಿತ್ತು. ಆದರೂ ಅಬ್ಬಕ್ಕ ಪೋರ್ಚುಗೀಸರಿಗೆ ಶರಣಾಗಲಿಲ್ಲ. ಇದೇ ಗಾಯದಿಂದಲೇ ಅಬ್ಬಕ್ಕ ಸಾವನ್ನಪ್ಪಿದ್ದರು. ರಾಣಿ ಅಬ್ಬಕ್ಕನ ಕಥೆಗೆ ಸುಖಾಂತ್ಯವಿಲ್ಲ. ಆದರೂ ತುಳುನಾಡು ಕಂಡ ಶೂರ ಹೆಣ್ಣು ಆಕೆ. ವಸಾಹತುಶಾಹಿಗೆ ಪ್ರತಿರೋಧ ಒಡ್ಡಿ ಕೊನೆಯ ಉಸಿರಿರುವವರೆಗೂ ಹೋರಾಡಿದ ನಾಯಕಿ.