ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಪೊಲೀಸರು ತರಬೇತಿ ಪಡೆದ ಶ್ವಾನಗಳನ್ನು ಬಳಸುತ್ತಾರೆ. ಆದರೆ ಇಲ್ಲೊಂದು ವಿಲಕ್ಷಣ ಘಟನೆಯಲ್ಲಿ ಪೊಲೀಸ್ ನಾಯಿಯನ್ನೇ ಕಳ್ಳರು ಕದ್ದು ಪರಾರಿಯಾಗಿದ್ದಾರೆ
ಇಂಥದ್ದೊಂದು ಪ್ರಕರಣ ಮಧ್ಯಪ್ರದೇಶದ ನಿವಾರಿ ಜಿಲ್ಲೆಯ ಪ್ರವಾಸಿತಾಣ ಓರ್ಚಾದಲ್ಲಿ ನಡೆದಿದ್ದು, ಜರ್ಮನ್ ಶೆಫರ್ಡ್ ತಳಿಗೆ ಸೇರಿದ ಪೊಲೀಸ್ ನಾಯಿ ಪಟಾಕಿ ಸಿಡಿಸುತ್ತಿದ್ದ ಕಾರಣ ಗಾಬರಿಗೊಂಡು ದೇವಾಲಯವೊಂದರ ಹಿಂದೆ ಅಡಗಿ ನಿಂತಿತ್ತು.
ಈ ವೇಳೆ ಎಸ್ ಯು ವಿ ನಲ್ಲಿ ಬಂದ ನಾಲ್ವರು ಅದನ್ನು ಹಿಡಿದುಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಇದೀಗ ಪೊಲೀಸರು ಕಳುವಾಗಿರುವ ನಾಯಿಯ ಪತ್ತೆಗೆ ಮುಂದಾಗಿದ್ದಾರೆ.