ಕೊಪ್ಪಳ; ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹಾಗೂ ಹಾಲಿ ಸಚಿವ ಹಾಲಪ್ಪ ಆಚಾರ್ ನಡುವಿನ ಶೀತಲ ಸಮರ ತಾರಕಕ್ಕೇರಿದ್ದು, ತಮಗೆ ಭದ್ರತೆ ನೀಡದೇ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿಗೆ ಪೊಲೀಸರು ಭದ್ರತೆ ನೀಡಿದ ವಿಚಾರವಾಗಿ ಅಸಮಾಧಾನಗೊಂಡಿರುವ ಹಾಲಪ್ಪ ಆಚಾರ್, ಪೊಲೀಸ್ ಇಲಾಖೆ ಮೇಲೆಯೇ ಸಿಟ್ಟಾಗಿದ್ದಾರೆ.
ಪೊಲೀಸರನ್ನು ನಾನು ಹೋಗುವ ಕಡೆಯಲ್ಲ ಕಟ್ಟಿಕೊಂಡು ಓಡಾಡಲು ಅವರಿಗೆ ಇಲಾಖೆಯಲ್ಲಿ ಮಾಡಲು ಸಾಕಷ್ಟು ಕೆಲಸಗಳಿವೆ. ನನಗೆ ಅವಶ್ಯವಿದ್ದಾಗ ಮಾತ್ರ ಅವರನ್ನು ಬಳಸಿಕೊಳ್ಳುತ್ತೇನೆ ಹೊರತು ಖಾಲಿ ಇದ್ದಾಗ ಅವರನ್ನು ಕಟ್ಟಿಕೊಂಡು ಯಾಕೆ ಅಡ್ಡಾಡಲಿ? ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ರಾಯರೆಡ್ಡಿಗೆ ತಿರುಗೇಟು ನೀಡಿದ್ದಾರೆ.
ಸೌದಿ ವಿಮಾನ ನಿಲ್ದಾಣದಲ್ಲಿ ಸ್ಪೋಟಕಗಳಿದ್ದ ಡ್ರೋನ್ ದಾಳಿ: ವಿವಿಧ ದೇಶಗಳ 10 ಮಂದಿಗೆ ಗಾಯ, ನಿಲ್ದಾಣಕ್ಕೆ ಹಾನಿ
ಅಲ್ಲದೇ ಸಚಿವರು ಕ್ಷೇತ್ರದಲ್ಲಿ ಪೊಲೀಸ್ ಭದ್ರತೆ ತಿರಸ್ಕರಿಸಿ ಓಡಾಟ ನಡೆಸಿದ್ದಾರೆ ಎನ್ನಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಅವರಿಗೆ ಮಾಡಲು ಬೇಕಾದಷ್ಟು ಕೆಲಸವಿರುವಾಗ ನಾನ್ಯಾಕೆ ಅವರ ಕೆಲಸ ಕೆಡಿಸಲಿ? ಇಲಾಖೆಯಲ್ಲಿ ನ್ಯೂನ್ಯತೆಗಳಿವೆ ಅವರಿಗೆ ಅವರದ್ದೇ ಕೆಲಸ ಮಾಡಲಾಗದಿರುವಾಗ ನಮ್ದು ಒಂದು ಜಾತ್ರೆ, ಆಡಂಬರ ಯಾಕೆ ಬೇಕು? ಎಂದು ಕಿಡಿಕಾರಿದ್ದಾರೆ.