alex Certify ಪೊಲೀಸರ ನೋಟಿಸಿಗೂ ಮುನ್ನವೇ ಸಂಚಾರ ನಿಯಮ ಉಲ್ಲಂಘಿಸಿದವರಿಂದ ದಂಡ ಪಾವತಿಸಲು ನೆರವು ಕೋರಿ ಟ್ವೀಟ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸರ ನೋಟಿಸಿಗೂ ಮುನ್ನವೇ ಸಂಚಾರ ನಿಯಮ ಉಲ್ಲಂಘಿಸಿದವರಿಂದ ದಂಡ ಪಾವತಿಸಲು ನೆರವು ಕೋರಿ ಟ್ವೀಟ್….!

ಆಕಸ್ಮಿಕವಾಗಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರೊಬ್ಬರು ತಮಗೆ ಪೊಲೀಸರು ನೋಟಿಸ್ ನೀಡುವ ಮುನ್ನವೇ, ನಾನು ಈ ರೀತಿ ಸಂಚಾರ ನಿಯಮ ಉಲ್ಲಂಘಿಸಿದ್ದೇನೆ. ಇದಕ್ಕಾಗಿ ದಂಡ ಪಾವತಿಸಬಹುದೇ ಎಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಇಂಥದೊಂದು ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದು, ವೃತ್ತಿಯಲ್ಲಿ ಆರ್ಥಿಕ ಸಲಹೆಗಾರರಾದ ಬಾಲಕೃಷ್ಣ ಬಿರ್ಲಾ ಎಂಬವರು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಮಂಗಳವಾರದಂದು ಆಕಸ್ಮಿಕವಾಗಿ ಸಂಚಾರ ನಿಯಮ ಉಲ್ಲಂಘಿಸಿದ್ದರು. ಈ ತಪ್ಪಿನ ಅರಿವು ಅವರಿಗೆ ತಕ್ಷಣವೇ ಆಗಿದೆ.

ಹೀಗಾಗಿ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ ಅವರು, ನಾನು ಸಂಚಾರ ನಿಯಮ ಉಲ್ಲಂಘಿಸಿದ್ದು, ಪೊಲೀಸರು ನೋಟಿಸ್ ನೀಡುವ ಮುನ್ನವೇ ದಂಡ ಪಾವತಿಸಬಹುದೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ಸಂಚಾರಿ ಪೊಲೀಸರು ಸಹ ಪ್ರತಿಕ್ರಿಯಿಸಿದ್ದು, ನೋಟಿಸ್ ನೀಡಿದ ಬಳಿಕವೇ ದಂಡ ಪಾವತಿಸಬಹುದು ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...