ಉತ್ತರ ಪ್ರದೇಶದ ನೋಯ್ಡಾದಲ್ಲಿ ಪೊಲೀಸರನ್ನೇ ಬೆಚ್ಚಿ ಬೀಳಿಸುವಂಥ ಘಟನೆಯೊಂದು ನಡೆದಿದೆ. 10 ವರ್ಷದ ಬಾಲಕನೊಬ್ಬ ಗೋಣಿ ಚೀಲದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಎರಡು ದಿನಗಳ ಹಿಂದೆ ಈ ಬಾಲಕ ನಾಪತ್ತೆಯಾಗಿದ್ದ.
ಪಕ್ಕದ ಗಾಜಿಯಾಬಾದ್‌ನ ಖೋರಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪೋಷಕರು ದೂರು ದಾಖಲಿಸಿದ್ದರು. ಕೊಲೆಯಾಗಿರುವ ಬಾಲಕ ಖೋರಾ ಕಾಲೋನಿಯ ವಂದನಾ ಎನ್‌ಕ್ಲೇವ್‌ನ ನಿವಾಸಿಯಾಗಿದ್ದ.
ಪೊಲೀಸರ ಪ್ರಕಾರ, ಹುಡುಗನ ತಾಯಿಯ ಸೋದರ ಸಂಬಂಧಿಯೇ ಈ ಕೃತ್ಯ ಎಸಗಿದ್ದಾನೆ. ಬಾಲಕನನ್ನು ಕೊಂದು ಶವವನ್ನು ನೋಯ್ಡಾದ ಸೆಕ್ಟರ್ 54ರ ನಿರ್ಜನ ಪ್ರದೇಶದಲ್ಲಿ ಎಸೆದಿದ್ದಾನೆ ಎನ್ನಲಾಗ್ತಾ ಇದೆ.
ಯಾವ ಕಾರಣಕ್ಕೆ ಈ ಹತ್ಯೆ ನಡೆದಿದೆ ಅನ್ನೋದು ಸ್ಪಷ್ಟವಾಗಿಲ್ಲ. ಕೌಟುಂಬಿಕ ಕಲಹ ಕಾರಣವೋ ? ಅಥವಾ ಮಾಟ ಮಂತ್ರಕ್ಕೇನಾದರೂ ಬಾಲಕನನ್ನು ಬಲಿ ಕೊಡಲಾಗಿದೆಯಾ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ. ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದು, ಹೆಚ್ಚಿನ ತನಿಖೆ ನಡೆಸ್ತಿದ್ದಾರೆ.