ದಕ್ಷಿಣ ಕನ್ನಡ: ಹಿಂದೂಸ್ತಾನ್ ಪೆಟ್ರೋಲಿಯಂಗೆ ಸೇರಿದ ಪೈಪ್ ಲೈನ್ ಗೆ ಕನ್ನ ಹಾಕಿ ಪೆಟ್ರೋಲ್ ಕದ್ದು ಮಾರಾಟ ಮಾಡುತ್ತಿದ್ದ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆ ಬಟ್ವಾಳ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಐವಾನ್ ಎಂಬುವವರ ಜಮೀನಿನಲ್ಲಿದ್ದ ಪೈಪ್ ಲೈನ್ ಗೆ ಮತ್ತೊಂದು ಪೈಪ್ ಅಳವಡಿಸಿ ಅರ್ಧ ಕಿ.ಮೀ ದೂರದಲ್ಲಿ ಪೈಪ್ ಗೆ ಗೇಟ್ ವಾಲ್ವ್ ಅಳವಡಿಕೆ ಮಾಡಿ ಪೆಟ್ರೋಲ್ ಕದ್ದು ಮಾರಾಟ ಮಾಡುತ್ತಿದ್ದರು. ಪೆಟ್ರೋಲ್ ಪೂರೈಕೆಯಲ್ಲಿ ವ್ಯತ್ಯಾಸವಾಗಿದ್ದರಿಂದ ಪರಿಶೀಲನೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಮಕ್ಕಳ ಡೈಪರ್ ಮರುಬಳಕೆ; ಸಂಶೋಧನೆ ಬಳಿಕ ಬ್ಯಾಂಡೇಜ್ ತಯಾರಿಕೆ….!
ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.