ಬಿಸಿ ಬಿಸಿ ಅನ್ನಕ್ಕೆ ಫೈನಾಪಲ್ ರಾಯಿತ ಹಾಕಿಕೊಂಡು ಸವಿಯುತ್ತಿದ್ದರೆ ಅದರ ರುಚಿನೇ ಬೇರೆ. ಇಲ್ಲಿ ಸುಲಭವಾಗಿ ಮಾಡಬಹುದಾದ ಫೈನಾಪಲ್ ರಾಯಿತ ಇದೆ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
ಪೈನಾಪಲ್ ಹೋಳು – 2 ಕಪ್, ಅರಿಶಿನ – 1 ಟೀ ಸ್ಪೂನ್, ಖಾರದ ಪುಡಿ – 1 ಟೀ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ಸಕ್ಕರೆ – 2 ಟೀ ಸ್ಪೂನ್, ಮೊಸರು – 1 ಕಪ್, ತೆಂಗಿನಕಾಯಿ ತುರಿ – 1/2 ಕಪ್, ಜೀರಿಗೆ – 1 ಟೀ ಸ್ಪೂನ್, ಹಸಿಮೆಣಸು – 1,
ಒಗ್ಗರಣೆಗೆ: ಎಣ್ಣೆ – 1 ಟೇಬಲ್ ಸ್ಪೂನ್, ಸಾಸಿವೆ – 1 ಟೀ ಸ್ಪೂನ್, ಜೀರಿಗೆ – 1ಟೀ ಸ್ಪೂನ್, ಇಂಗು – 1/4 ಟೀ ಸ್ಪೂನ್, ಕರಿಬೇವು – 10 ಎಸಳು.
ಮಾಡುವ ವಿಧಾನ:
ಮೊದಲು ಪೈನಾಪಲ್ ಹೋಳುಗಳನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಇದನ್ನು ಒಂದು ಬಾಣಲೆಗೆ ಹಾಕಿಕೊಂಡು ಬಿಸಿ ಮಾಡಿ. ಇದಕ್ಕೆ ಅರಿಸಿನ ಪುಡಿ, ಖಾರದ ಪುಡಿ, ಉಪ್ಪು, ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ ಒಂದು ಮುಚ್ಚಳ ಮುಚ್ಚಿ 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
ನಂತರ ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ. ಜೀರಿಗೆ, ಹಸಿಮೆಣಸು ಸೇರಿಸಿ ತುಸು ನೀರು ಹಾಕಿ ರುಬ್ಬಿಕೊಳ್ಳಿ. ಇದನ್ನು ಪೈನಾಪಲ್ ಮಿಶ್ರಣಕ್ಕೆ ಹಾಕಿ 5 ನಿಮಿಷಗಳ ಕಾಲ ಬೇಯಿಸಿಕೊಂಡು ಗ್ಯಾಸ್ ಆಫ್ ಮಾಡಿ. ನಂತರ ಮೊಸರು ಮಿಕ್ಸ್ ಮಾಡಿ. ಒಗ್ಗರಣೆ ಪಾತ್ರೆಯನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಇಂಗು, ಕರಿಬೇವು ಸೇರಿಸಿ ಇದನ್ನು ಫೈನಾಪಲ್ ಮಿಶ್ರಣಕ್ಕೆ ಸೇರಿಸಿ.