alex Certify ಪೈನಾಪಲ್‌ ಚಟ್ನಿ ಮಾಡುವುದು ಹೇಗೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೈನಾಪಲ್‌ ಚಟ್ನಿ ಮಾಡುವುದು ಹೇಗೆ ಗೊತ್ತಾ….?

​ಪೈನಾಪಲ್‌ ಜಾಮ್ ಮತ್ತು ಜ್ಯೂಸ್ ಸವಿದಿದ್ದೀರಾ. ಆದರೆ ಪೈನಾಪಲ್‌ ಚಟ್ನಿ ರುಚಿ ಹೇಗಿರುತ್ತದೆ ಅಂತ ಟ್ರೈ ಮಾಡಿದ್ದೀರಾ.

ದಿನಾ ಒಂದೇ ಬಗೆಯ ಚಟ್ನಿ ತಿಂದು ಬೇಜಾರಾಗಿದ್ದರೆ, ಈ ಸೂಪರ್‌ ಟೇಸ್ಟ್‌ನ ಚಟ್ನಿ ಟ್ರೈ ಮಾಡಿ. ಚಪಾತಿ ಜೊತೆ ತಿನ್ನಲು ಬಲು ರುಚಿಯಾಗಿರುತ್ತದೆ. ಇದರ ರೆಸಿಪಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

ಪೈನಾಪಲ್‌ 1 ಕಪ್‌
ವಿನಿಗರ್ 1 ಚಮಚ
ಸಕ್ಕರೆ 1 ಚಮಚ
ನಕ್ಷತ್ರ ಮೊಗ್ಗು ಸ್ವಲ್ಪ
ಚಕ್ಕೆ ಸ್ವಲ್ಪ
ಲೆಮನ್‌ ಗ್ರಾಸ್‌ ಸ್ವಲ್ಪ
ಕಾಳು ಮೆಣಸು ಸ್ವಲ್ಪ
ಬೆಳ್ಳುಳ್ಳಿ, ಶುಂಠಿ ಸ್ವಲ್ಪ
ಸ್ಪ್ರಿಂಗ್‌ ಆನಿಯನ್ ಅಥವಾ ಕೊತ್ತಂಬರಿ ಸೊಪ್ಪು ಅಲಂಕಾರಕ್ಕೆ

ಮಾಡುವ ವಿಧಾನ

ತಳ ದಪ್ಪವಿರುವ ಪಾತ್ರೆಯನ್ನು ಉರಿ ಮೇಲೆ ಇಡಿ. ನಂತರ 1 ಚಮಚ ವಿನಿಗರ್ ಹಾಗೂ 1 ಚಮಚ ಸಕ್ಕರೆ ಹಾಕಿ ಮಿಕ್ಸ್ ಮಾಡಿ.

ಈಗ ಲೆಮನ್ ಗ್ರಾಸ್‌, ನಕ್ಷತ್ರ ಮೊಗ್ಗು, ಚಕ್ಕೆ, ನಿಂಬೆರಸ, ಕರಿಮೆಣಸು (ತರಿತರಿಯಾಗಿ ಪುಡಿ ಮಾಡಿದ್ದು), ಬೆಳ್ಳುಳ್ಳಿ, ಶುಂಠಿ (ಚಿಕ್ಕದಾಗಿ ಕತ್ತರಿಸಿದ್ದು) ಹಾಕಿ ಮಿಕ್ಸ್ ಮಾಡಿ.

ಮಿಶ್ರಣ ದಪ್ಪವಾದಾಗ ಪೈನಾಪಲ್‌ ತುಂಡುಗಳನ್ನು ಹಾಕಿ 1 ನಿಮಿಷ ಬೇಯಿಸಿ, ಸ್ಮಾಶ್ ಮಾಡಿ. ರೆಡಿಯಾದ ಪೈನಾಪಲ್ ಚಟ್ನಿಯನ್ನು ಕೊತ್ತಂಬರಿ ಸೊಪ್ಪು ಅಥವಾ ಸ್ಪ್ರಿಂಗ್ ಆನಿಯನ್‌ನಿಂದ ಅಲಂಕರಿಸಿ ಸವಿಯಲು ನೀಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...