ಚಿಕ್ಕಮಗಳೂರು: ಕಾಂಗ್ರೆಸ್ ನಾಯಕರ ಪೇಸಿಎಂ ಪೋಸ್ಟರ್ ಅಭಿಯಾನದ ಬಗ್ಗೆ ಕಿಡಿಕಾರಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಪೇ ಸಿಎಂ ಸರಿಯಾಗಿದೆ. ಆದರೆ ಬೈ ಮಿಸ್ಟೇಕ್ ಸಿಎಂ ಬೊಮ್ಮಾಯಿ ಅವರ ಫೋಟೋ ಹಾಕಿದ್ದಾರೆ ಎಂದು ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, ಪೇಸಿಎಂ ಸರಿಯಿದೆ. ಆದರೆ ಫೋಟೋ ತಪ್ಪಾಗಿ ಹಾಕಿದ್ದಾರೆ. ಕಾಂಗ್ರೆಸ್ ಅಧಿನಾಯಕಿ ಫೋಟೋ ಬದಲು ಸಿಎಂ ಬಸವರಾಜ್ ಬೊಮ್ಮಾಯಿ ಫೋಟೋ ಹಾಕಿದ್ದಾರೆ ಎಂದರು.
ಕಾಂಗ್ರೆಸ್ ನವರು ತಮ್ಮ ಅಧಿನಾಯಕಿ ಫೋಟೋ ಹಾಕಬೇಕಿತ್ತು. ಪೇ ಫಾರ್ ಕಾಂಗ್ರೆಸ್ ಮೇಡಂ ಬದಲಾಗಿ ಸಿಎಂ ಫೋಟೊ ಹಾಕಿದ್ದಾರೆ. ಅಧಿನಾಯಕಿ ನಮ್ಮ ಲೋಕಲ್ ಅಲ್ಲ, ಇಂಟರ್ ನ್ಯಾಷನಲ್. ಕಾಂಗ್ರೆಸ್ ನವರು ಹೈಕಮಾಂಡ್ ಗೆ ಕಪ್ಪ ಕೊಡುತ್ತಿದ್ದರು. ಕರ್ನಾಟಕವನ್ನು ಕಪ್ಪ ಕೊಡುವ ಎಟಿಎಂ ಮಾಡಿಕೊಂಡಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.