ಪೇರಲೆ ಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ. ತಿನ್ನಲು ರುಚಿಕರವಾಗಿರುವ ಹಣ್ಣು ಆರೋಗ್ಯಕ್ಕೂ ಒಳ್ಳೆಯದು. ನಿಮಗೆ ಪೇರಲೆ ಹಣ್ಣಿನ ರುಚಿ ಮಾತ್ರ ಗೊತ್ತು. ಆದ್ರೆ ಪೇರಲೆ ಎಲೆಗಳು ಕೂಡ ಬಹಳ ಒಳ್ಳೆಯದು.
ಪೇರಲೆ ಎಲೆ ಬ್ಯಾಕ್ಟಿರಿಯಾ ವಿರೋಧಿ ಗುಣವನ್ನು ಹೊಂದಿದೆ. ಉರಿಯೂತ ನಿರೋಧಕ ಶಕ್ತಿ ಕೂಡ ಇದರಲ್ಲಿದೆ. ಚರ್ಮ, ಕೂದಲು ಹಾಗೂ ಆರೋಗ್ಯ ವೃದ್ಧಿಗೆ ಇದು ಪ್ರಯೋಜನಕಾರಿ.
ಪೇರಲೆ ಎಲೆ ತೂಕ ಕಡಿಮೆ ಮಾಡಲು ನೆರವಾಗುತ್ತದೆ. ಮಧುಮೇಹ ರೋಗಿಗಳಿಗೆ ಸಹಕಾರಿ. ರಕ್ತದೊತ್ತಡ ನಿಯಂತ್ರಣ ಮಾಡುತ್ತದೆ. ಅತಿಸಾರ ನಿವಾರಣೆಗೆ ಲಾಭದಾಯಕ. ಜೀರ್ಣಕ್ರಿಯೆಯನ್ನು ಸುಗಮಗೊಳಿಸಲು ನೆರವಾಗುತ್ತದೆ.