ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಪೇಟೆಂಟ್ಗೆ ಅರ್ಜಿ ಸಲ್ಲಿಸುವ ಮಾನ್ಯತೆ ಪಡೆದ ಭಾರತದ ಅಥವಾ ವಿದೇಶಿ ಶಿಕ್ಷಣ ಸಂಸ್ಥೆಗಳಿಗೆ ಶೇಕಡಾ 80ರಷ್ಟು ಶುಲ್ಕ ಕಡಿತ ಮಾಡೋದಾಗಿ ಘೋಷಣೆ ಮಾಡಿದ್ದಾರೆ. ಈ ಹಿಂದೆ ಶೇಕಡಾ 80ರಷ್ಟು ಶುಲ್ಕ ವಿನಾಯ್ತಿಯು ಕೇವಲ ಸರ್ಕಾರಿ ಸ್ವಾಮ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತಿತ್ತು ಎಂದು ಹೇಳಿದರು.
ಇನ್ಮುಂದೆ ಈ 80 ಪ್ರತಿಶತ ಶುಲ್ಕ ಕಡಿತವು ದೇಶ ಅಥವಾ ವಿದೇಶದಲ್ಲಿರುವ ಸರ್ಕಾರಿ ಸ್ವಾಮ್ಯದ, ಸರ್ಕಾರದಿಂದ ಮಾನ್ಯತೆ ಪಡೆದ, ಖಾಸಗಿ ಸಂಸ್ಥೆಗಳಿಗೆ ಅನ್ವಯಿಸಲಿದೆ ಎಂದು ಗೋಯಲ್ ಹೇಳಿದ್ದಾರೆ.
ಮಾನ್ಯತೆ ಪಡೆದ ಎಲ್ಲಾ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಶಾಲೆಗಳು ಹಾಗೂ ಕಾಲೇಜುಗಳು ಇನ್ಮೇಲೆ ಶೇಕಡಾ 80ರಷ್ಟು ಶುಲ್ಕ ಕಡಿತದ ಪ್ರಯೋಜನವನ್ನು ಪಡೆಯಬಹುದಾಗಿದೆ ಎಂದು ಗೋಯಲ್ ಇದೇ ವೇಳೆ ಹೇಳಿದ್ರು.
ಒಂದು ಶಿಕ್ಷಣ ಸಂಸ್ಥೆಗೆ – ಫೈಲಿಂಗ್, ಪ್ರಕಾಶನ ಹಾಗೂ ನವೀಕರಣಗೆ ಪ್ರಸ್ತುತ 4.24 ಲಕ್ಷ ರೂಪಾಯಿ ಇರುವ ಮೊತ್ತವು ಕಡಿತವಾಗಿ 84,900 ರೂಪಾಯಿ ಆಗಲಿದೆ.
ನನ್ನ ಪ್ರಕಾರ ವಿಶ್ವವಿದ್ಯಾಲಯಗಳಿಗೆ ನಿಜಕ್ಕೂ ಇದು ವರದಾನವಾಗಿದೆ. ಹೀಗಾಗಿ ಸಾಕಷ್ಟು ಹೊಸ ಹೊಸ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳು ಇದರ ಲಾಭವನ್ನು ಪಡೆಯಲಿದೆ ಎಂದು ನಂಬಿದ್ದೇನೆ ಎಂದು ಗೋಯಲ್ ಹೇಳಿದ್ದಾರೆ.