
ಹೌದು, ಸ್ವಯಂ ಘೋಷಿತ ದೇವಮಾನವ ಉತ್ತರ ಪ್ರದೇಶದ ಬಾಗಪಟ್ ನ ಆಶ್ರಮದಲ್ಲಿ ಇದ್ದಾನೆ ಎನ್ನಲಾಗಿದೆ. ಈತನನ್ನ ನೋಡಲು ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಕರ್ನಾಲ್ ಮೇಯರ್ ರೇಣು ಬಾಲ ಗುಪ್ತಾ, ಉಪ ಮೇಯರ್ ನವೀನ್ ಕುಮಾರ್ ಮತ್ತು ರಾಜೇಶ್ ಅಗ್ಗಿ, ಚುನಾವಣೆಗೆ ನಿಂತ ಇತರ ಅಭ್ಯರ್ಥಿಗಳು ಈತನ ಭೇಟಿಗಾಗಿ ಸಾಲುಗಟ್ಟಿ ನಿಂತಿದ್ದರು ಎನ್ನಲಾಗಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಇನ್ನು ಈ ಪೆರೋಲ್ ಸದ್ಯ ಚರ್ಚೆಗೆ ಗ್ರಾಸವಾಗಿದೆ. ಯಾಕಂದರೆ, ನವೆಂಬರ್ 3 ರಂದು ನಡೆಯಲಿರುವ ಅದಮ್‌ಪುರ್ ಉಪ ಚುನಾವಣೆ ಮತ್ತು ನವೆಂಬರ್ 12 ರಂದು ನಡೆಯಲಿರುವ ಹರ್ಯಾಣ ಪಂಚಾಯತ್ ಚುನಾವಣೆಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಂಭವಿಸಿರೋದು ವಿಪರ್ಯಾಸ.
ಇನ್ನು, ಈತ ತನ್ನ ಪಂಥದ ಮಾಜಿ ಮ್ಯಾನೇಜರ್ ಒಬ್ಬರನ್ನು ಕೊಲೆಗೈದ ಪ್ರಕರಣದಲ್ಲಿ ಈತ ಮತ್ತು ಇತರ ನಾಲ್ವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ತನ್ನ ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರಗೈದ ಪ್ರಕರಣದಲ್ಲಿ ಆತ 20 ವರ್ಷಗಳ ಕಾರಾಗೃಹ ಶಿಕ್ಷೆಗೆ ಒಳಗಾಗಿದ್ದರು.