alex Certify ಪೆದ್ದು ಪೆದ್ದಾಗಿ ಹಣ್ಣು ತಿಂದ ಮರಿ ಕೋತಿ: ಕ್ಯೂಟ್ ವಿಡಿಯೋಗೆ ಮನಸೋತ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೆದ್ದು ಪೆದ್ದಾಗಿ ಹಣ್ಣು ತಿಂದ ಮರಿ ಕೋತಿ: ಕ್ಯೂಟ್ ವಿಡಿಯೋಗೆ ಮನಸೋತ ನೆಟ್ಟಿಗರು

Viral Video: Baby Monkey Eats Dragon Fruit For The First Time, Reaction is Too Adorable | Watchಪ್ರಾಣಿಗಳ ವಿಡಿಯೋಗಳೆಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ನಾಯಿಮರಿಗಳ ಮುದ್ದಾದ ವಿಡಿಯೋಗಳು, ಬೆಕ್ಕುಗಳ ತುಂಟಾಟ, ಆನೆಮರಿಗಳ ಆಟ ನೋಡಲು ಮಜವಾಗಿರುತ್ತದೆ. ಇದೀಗ ಇಂಥದ್ದೇ ಒಂದು ಕ್ಯೂಟ್ ವಿಡಿಯೋ ವೈರಲ್ ಆಗಿದೆ. ಮರಿ ಮಂಗವು ಡ್ರ್ಯಾಗನ್ ಹಣ್ಣನ್ನು ಸವಿಯುತ್ತಿರುವ ವಿಡಿಯೋ ವೈರಲ್ ಆಗಿದೆ.

ಕಾಡಿನಲ್ಲಿ ಮರಿ ಕೋತಿಯೊಂದಕ್ಕೆ ವ್ಯಕ್ತಿಯೊಬ್ಬ ಡ್ರ್ಯಾಗನ್ ಹಣ್ಣನ್ನು ನೀಡಿದ್ದಾನೆ. ಹಣ್ಣಿನ ಮುಂಭಾಗ ಕುಳಿತಿದ್ದ ಮರಿ ಕೋತಿಯು ಡ್ರ್ಯಾಗನ್ ಹಣ್ಣನ್ನು ಕತ್ತರಿಸುವುದನ್ನು ಬಾಯಲ್ಲಿ ಬೆರಳು ಚೀಪಿಕೊಂಡು ದಿಟ್ಟಿಸಿದೆ. ನಂತರ ಕೋತಿಗೆ ಹಣ್ಣಿನ ಸ್ಲೈಸ್ ಅನ್ನು ನೀಡುತ್ತಾನೆ.

ಹಣ್ಣನ್ನು ಕತ್ತರಿಸಿ ಮರಿ ಮಂಗದ ಬಳಿ ಇಟ್ಟರೂ ಅದಕ್ಕೆ ಏನು ಮಾಡಬೇಕೆಂಬುದು ಗೊತ್ತಾಗಿಲ್ಲ. ನಂತರ ಆ ವ್ಯಕ್ತಿ ಹಣ್ಣನ್ನು ತೆಗೆದುಕೊಂಡು ತಿನ್ನುತ್ತಾನೆ. ಬಳಿಕ ಕೋತಿ ಬಳಿ ಇಟ್ಟಾಗ ತಕ್ಷಣವೇ ಅದು ಹಣ್ಣನ್ನು ತಿಂದಿದೆ.

ಈ ಮುದ್ದಾದ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಮೂಲ ವಿಡಿಯೋವನ್ನು ಆದಿ ದ್ವಿ ಎಂಬ ಇನ್ಸ್ಟಾಗ್ರಾಂ ಬಳಕೆದಾರರು ಚಿತ್ರೀಕರಿಸಿದ್ದಾರೆ. ಮರಿ ಕೋತಿಗೆ ನುನುಕ್ ಎಂದು ಹೆಸರಿಡಲಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಗಳು ಮತ್ತು ನೂರಾರು ಕಾಮೆಂಟ್‌ಗಳನ್ನು ಸ್ವೀಕರಿಸಲಾಗಿದೆ. ನೆಟ್ಟಿಗರು ಮುದ್ದಾದ ಮರಿ ಕೋತಿಯನ್ನು ಇಷ್ಟಪಟ್ಟಿದ್ದಾರೆ. ಕಾಮೆಂಟ್‌ಗಳ ವಿಭಾಗವನ್ನು ಪ್ರೀತಿ, ಹೃದಯದ ಎಮೋಜಿಗಳೊಂದಿಗೆ ತುಂಬಿದ್ದಾರೆ.

https://www.youtube.com/watch?v=w-wlpovnoio

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...