alex Certify ಪೆಟ್ರೋಲ್‌-ಡೀಸೆಲ್‌ ವಾಹನಗಳ ಮಾರಾಟವನ್ನೇ ಬಂದ್‌ ಮಾಡಲಿದೆ ಈ ಕಂಪನಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೆಟ್ರೋಲ್‌-ಡೀಸೆಲ್‌ ವಾಹನಗಳ ಮಾರಾಟವನ್ನೇ ಬಂದ್‌ ಮಾಡಲಿದೆ ಈ ಕಂಪನಿ….!

ಸದ್ಯ ಜಗತ್ತಿನಾದ್ಯಂತ ಎಲೆಕ್ಟ್ರಿಕ್‌ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಹಾಗಾಗಿ ವಾಹನ ತಯಾರಿಕಾ ಕಂಪನಿ ವೋಕ್ಸ್‌ವ್ಯಾಗನ್ ಈ ವರ್ಷದ ಅಂತ್ಯದ ವೇಳೆಗೆ ಪೆಟ್ರೋಲ್‌, ಡೀಸೆಲ್‌ ಕಾರುಗಳ ಮಾರಾಟವನ್ನೇ ನಿಲ್ಲಿಸಲಿದೆ. ಗಮನಾರ್ಹ ಅಂಶವೆಂದರೆ ವೋಕ್ಸ್‌ವ್ಯಾಗನ್‌, ಐಸಿಇ ವಾಹನಗಳ ಮಾರಾಟವನ್ನು ಬಂದ್‌ ಮಾಡ್ತಿರೋದು ನಾರ್ವೆಯಲ್ಲಿ ಮಾತ್ರ.

ಮುಂದಿನ ವರ್ಷದಿಂದ ನಾರ್ವೆಯಲ್ಲಿ ಈ ಕಂಪನಿ ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳನ್ನು ಮಾರಾಟ ಮಾಡುವುದಿಲ್ಲ. ಕೇವಲ ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ (ಇವಿ) ಮಾರಾಟ ಮಾಡುತ್ತದೆ. ನಾರ್ವೆಯಲ್ಲಿರುವ ಫೋಕ್ಸ್‌ವ್ಯಾಗನ್‌ನ ಆಮದುದಾರ – ಮೊಲ್ಲರ್ ಮೊಬಿಲಿಟಿ ಗ್ರೂಪ್ ಈ ಬಗ್ಗೆ ಮಾಹಿತಿ ನೀಡಿದೆ.

ವೋಕ್ಸ್‌ವ್ಯಾಗನ್ ತನ್ನ ಕೊನೆಯ ICE ಕಾರುಗಳನ್ನು ಈ ವರ್ಷದ ಡಿಸೆಂಬರ್‌ನಲ್ಲಿ ನಾರ್ವೆಯಲ್ಲಿ ಮಾರಾಟ ಮಾಡುತ್ತದೆ ಮತ್ತು ನಂತರ ಅವುಗಳ ಮಾರಾಟ ನಿಲ್ಲಿಸುತ್ತದೆ. ಕಂಪನಿಯು ಡಿಸೆಂಬರ್ 2023 ರೊಳಗೆ ಎಲ್ಲಾ ICE ಕಾರ್ ಆರ್ಡರ್‌ಗಳನ್ನು ಪೂರ್ಣಗೊಳಿಸಲು ಯೋಜಿಸಿದೆ.

ಈ ನಿರ್ಧಾರ ವಿಚಿತ್ರವಾಗಿ ಕಾಣಿಸಬಹುದು, ಆದರೆ ಇದು ಕಾಲಾನಂತರದಲ್ಲಿ ಮಹತ್ವಾಕಾಂಕ್ಷೆಯ ಮತ್ತು ಪ್ರಮುಖ ಹೂಡಿಕೆಯಾಗಲಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಎಲೆಕ್ಟ್ರಿಕ್ ವಾಹನಗಳ ಬಳಕೆಯಲ್ಲಿ ನಾರ್ವೆ ಇಡೀ ವಿಶ್ವದಲ್ಲೇ ನಂಬರ್‌ ವನ್‌ ಸ್ಥಾನದಲ್ಲಿದೆ. ಈ ದೇಶದ ಎಲ್ಲಾ ಪ್ರಯಾಣಿಕ ವಾಹನಗಳಲ್ಲಿ 20 ಪ್ರತಿಶತಕ್ಕಿಂತ ಹೆಚ್ಚು ಎಲೆಕ್ಟ್ರಿಕ್‌ ವಾಹಗಳಿವೆ. EV ಮಾರಾಟ ಕೂಡ ಶೇ. 84 ರಷ್ಟಾಗಿದೆ. ನಾರ್ವೆ ರೋಡ್ ಫೆಡರೇಶನ್ ಪ್ರಕಾರ, ಪ್ಲಗ್-ಇನ್ ಹೈಬ್ರಿಡ್ ಅನ್ನು ಸೇರಿಸಿದಾಗ ಈ ಅಂಕಿ ಅಂಶವು 90 ಪ್ರತಿಶತಕ್ಕೆ ತಲುಪುತ್ತದೆ.

ಮೂಲಗಳ ಪ್ರಕಾರ ನಾರ್ವೆ ಸರ್ಕಾರ 2025ರವೇಳೆಗೆ ಎಲ್ಲಾ ICE ವಾಹನಗಳನ್ನು ನಿಷೇಧಿಸಲು ಯೋಜಿಸುತ್ತಿದೆ. ಹಾಗೇನಾದ್ರೂ ಮಾಡಿದ್ರೆ ಈ ನಿರ್ಧಾರ ಕೈಗೊಂಡ ವಿಶ್ವದ ಮೊದಲ ದೇಶವಾಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...