ಪೆಟ್ರೋಲಿಯಂ ಜೆಲ್ಲಿ ಬಹುಉಪಯೋಗಿ ವಸ್ತು. ಕೈ, ಕಾಲುಗಳು ಮತ್ತು ತುಟಿ ಚರ್ಮವನ್ನು ಬಿರುಕುಗಳಿಂದ ರಕ್ಷಿಸಲು ಇದನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಅನೇಕರು ಪೆಟ್ರೋಲಿಯಂ ಜೆಲ್ಲಿಯನ್ನು ಮಾಯಿಶ್ಚರೈಸರ್ ಆಗಿ ಬಳಸುತ್ತಾರೆ. ಸೌಂದರ್ಯವಷ್ಟೇ ಅಲ್ಲ, ಪೆಟ್ರೋಲಿಯಂ ಜೆಲ್ಲಿಯಿಂದ ಇನ್ನೂ ಅನೇಕ ಉಪಯೋಗಗಳಿವೆ.
ಗಾಜು ಹಳೆಯದಾದಾಗ ಸ್ಪಷ್ಟವಾಗಿ ಕಾಣಿಸುವುದೇ ಇಲ್ಲ. ಅಂತಹ ಗಾಜಿನ ಮೇಲೆ ಪೆಟ್ರೋಲಿಯಂ ಜೆಲ್ಲಿಯನ್ನು ಅನ್ವಯಿಸಿ. ನಂತರ ಕಾಗದದಿಂದ ಸ್ವಚ್ಛಗೊಳಿಸಿ. ಈ ರೀತಿಯಾಗಿ 2-3 ಬಾರಿ ಸ್ವಚ್ಛಗೊಳಿಸಿದ ನಂತರ ಗಾಜಿನ ಗೀರುಗಳನ್ನು ಮಾಯವಾಗಿ ಶುಭ್ರವಾಗುತ್ತದೆ.
ಪೆಟ್ರೋಲಿಯಂ ಜೆಲ್ಲಿಯನ್ನು ಹುಬ್ಬುಗಳ ಮೇಲೆ ಹಚ್ಚುವುದರಿಂದ ಹುಬ್ಬಿನ ಕೂದಲು ಉದುರುವುದು ನಿಲ್ಲುತ್ತದೆ. ಕೆಲವೊಮ್ಮೆ ಶುಷ್ಕತೆಯಿಂದ ಹುಬ್ಬಿನ ಕೂದಲು ಉದುರಬಹುದು. ಪೆಟ್ರೋಲಿಯಂ ಜೆಲ್ಲಿಯಿಂದ ಕೂದಲು ತೇವ ಪಡೆದುಕೊಳ್ಳುತ್ತದೆ ಮತ್ತು ಹೊಳೆಯುತ್ತದೆ. ಅನೇಕ ಸುಗಂಧ ದ್ರವ್ಯಗಳ ಪರಿಮಳವು ಬೇಗನೆ ಆವಿಯಾಗುತ್ತದೆ.
ನೀವು ಸುಗಂಧ ದ್ರವ್ಯವನ್ನು ದೀರ್ಘಕಾಲ ಬಾಳಿಕೆ ಬರುವಂತೆ ಮಾಡಲು ಬಯಸಿದರೆ, ಅದರೊಂದಿಗೆ ಪೆಟ್ರೋಲಿಯಂ ಜೆಲ್ಲಿಯನ್ನು ಅನ್ವಯಿಸಿ. ಹೀಗೆ ಮಾಡಿದ್ರೆ ಪರಿಮಳ ಇಡೀ ದಿನ ಇರುತ್ತದೆ.
ಸ್ಪ್ಲಿಟ್ ಹೇರ್ಸ್ ಸರಿಪಡಿಸಲು ಕೂಡ ಪೆಟ್ರೋಲಿಯಂ ಜೆಲ್ಲಿಯನ್ನು ಬಳಸಬಹುದು. ಒಡೆದ ತುದಿಗಳಿಗೆ ಪೆಟ್ರೋಲಿಯಂ ಜೆಲ್ಲಿಯನ್ನು ಅನ್ವಯಿಸುವುದರಿಂದ, ಹಾನಿಗೊಳಗಾದ ಕೂದಲು ತೇವಾಂಶವನ್ನು ಪಡೆಯುತ್ತದೆ ಮತ್ತು ಸ್ಪ್ಲಿಟ್ ಹೇರ್ ಸಮಸ್ಯೆ ನಿವಾರಣೆಯಾಗುತ್ತದೆ.
ಬೂಟುಗಳನ್ನು ಪಾಲಿಶ್ ಮಾಡಲು ಪೆಟ್ರೋಲಿಯಂ ಜೆಲ್ಲಿಯನ್ನು ಬಳಸಬಹುದು. ಬ್ರಷ್‌ನಲ್ಲಿ ಪೆಟ್ರೋಲಿಯಂ ಜೆಲ್ಲಿಯನ್ನು ತೆಗೆದುಕೊಂಡು ಅದನ್ನು ಶೂಗಳ ಮೇಲೆ ಹಚ್ಚಿದರೆ ಬೂಟುಗಳು ಫಳ ಫಳ ಹೊಳೆಯುತ್ತವೆ.