alex Certify ಪೆಗಾಸಸ್ ಹಗರಣ; ತನಿಖೆಗೆ ಕೇಂದ್ರ ಸರ್ಕಾರ ಹಿಂಜರಿಯುತ್ತಿರುವುದೇಕೆ…..?; ಸ್ವಪಕ್ಷದವರನ್ನೇ ಗೂಢಾಚಾರಿಕೆ ನಡೆಸುವ ಬಿಜೆಪಿ ವಿಪಕ್ಷದವರನ್ನು ಬಿಟ್ಟೀತೆ…..?; ಕಾಂಗ್ರೆಸ್ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೆಗಾಸಸ್ ಹಗರಣ; ತನಿಖೆಗೆ ಕೇಂದ್ರ ಸರ್ಕಾರ ಹಿಂಜರಿಯುತ್ತಿರುವುದೇಕೆ…..?; ಸ್ವಪಕ್ಷದವರನ್ನೇ ಗೂಢಾಚಾರಿಕೆ ನಡೆಸುವ ಬಿಜೆಪಿ ವಿಪಕ್ಷದವರನ್ನು ಬಿಟ್ಟೀತೆ…..?; ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: ಜಗತ್ತಿನಾದ್ಯಂತ ಹಲವು ದೇಶದಲ್ಲಿ ಪೆಗಾಸಸ್ ಗೂಢಾಚಾರಿಕೆ ಹಗರಣ ನಡೆದಿರುವ ಸಂಗತಿ ಬೆಳಕಿದೆ ಬಂದಿದೆ, ಫ್ರಾನ್ಸ್‌ ಈ ಹಗರಣದ ತನಿಖೆಗೆ ಮುಂದಾಗಿದೆ.

ಆದರೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತದಲ್ಲಿ ತನಿಖೆಗೆ ಭಯಪಡುತ್ತಿರುವುದೇಕೆ..? ತನಿಖೆ ನಡೆದರೆ ತಮ್ಮ ಬಂಡವಾಳ ಬಯಲಾಗುವ ಆತಂಕವೇ.. ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಬಿಜೆಪಿಯ ಪೆಗಾಸಸ್‌ನಂತಹ ನೀಚ ಕೃತ್ಯ ಪ್ರಜಾಪ್ರಭುತ್ವದಲ್ಲಿ ಸಹಿಸಲಾಗದ ಸಂಗತಿ. ತಮ್ಮವರಿಂದಲೇ ‘ಬ್ಲಾಕ್ಮೇಲ್ ಜನತಾ ಪಾರ್ಟಿ’ ಎನಿಸಿಕೊಂಡ ರಾಜ್ಯ ಬಿಜೆಪಿ ಅಧಿಕಾರಕ್ಕಾಗಿ ಪ್ರಜಾಪ್ರಭುತ್ವದ ಘನತೆಗೆ ಚ್ಯುತಿ ತರುವ ಯಾವುದೇ ಅನೈತಿಕ ಕೃತ್ಯಕ್ಕೂ ಕೈ ಹಾಕುವುದು ಎಂಬುದು ಈಗಾಗಲೇ ಹಲವು ವಿಷಯಗಳಲ್ಲಿ ಸಾಬೀತು ಪಡಿಸಿದೆ ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಕಿಡಿಕಾರಿದೆ.

BIG NEWS: ವಾರಣಾಸಿಗೆ ಭೇಟಿ ನೀಡಿದ ಶಾಸಕ ಬೆಲ್ಲದ್; ಕುತೂಹಲ ಮೂಡಿಸಿದ ಸಿಎಂ ಸ್ಥಾನದ ಆಕಾಂಕ್ಷಿಗಳ ಕಾಶಿ ಯಾತ್ರೆ

ಇತ್ತೀಚಿಗೆ ಬಿಜೆಪಿ ಶಾಸಕ ಬೆಲ್ಲದ್ ಅವರು ನನ್ನ ಫೋನ್ ಕದ್ದಾಲಿಕೆಯಾಗುತ್ತಿದೆ ಎಂದು ಆರೋಪಿಸಿದ್ದರು, ಸ್ವತಃ ತಮ್ಮದೇ ಶಾಸಕರ ಗೂಢಾಚಾರಿಕೆ ನಡೆಸುವ
ರಾಜ್ಯ ಬಿಜೆಪಿ ವಿಪಕ್ಷ ನಾಯಕರನ್ನು ಬಿಟ್ಟೀತೇ? ಕ್ಷುದ್ರ ರಾಜಕಾರಣಕ್ಕೆ ಮುನ್ನುಡಿ ಬರೆದ ಬಿಜೆಪಿಯಿಂದ ದೇಶದ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ. ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಪ್ರಧಾನಿ ಮೋದಿ ಸರ್ಕಾರ ಪೆಗಾಸಿಸ್ ದುರ್ಬಳಕೆ ಮಾಡಿಕೊಂಡಿತು. ಇದು ಕೀಳು ರಾಜಕೀಯ ಪ್ರವೃತ್ತಿ, ಕಾನೂನಿನ ಪ್ರಕಾರ ಕ್ರಿಮಿನಲ್ ಅಪರಾಧ. ಹಗರಣವನ್ನ ಉನ್ನತ ಮಟ್ಟದ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದೆ.

ಪೆಗಾಸಸ್ ಗೂಢಾಚಾರಿಕೆ ದೇಶದ ಭದ್ರತೆಗೇ ಧಕ್ಕೆ ತರುವಂತಹ ಪ್ರಕರಣ. ಈ ಬೆಳವಣಿಗೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸಬಲ್ಲದು. ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಈ ಪ್ರಕರಣವನ್ನು ತನಿಖೆಗೆ ವಹಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...