ವಾಷಿಂಗ್ಟನ್: ಪೆಂಟಗನ್‌ನ ಭದ್ರತಾ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ಕೋಳಿಯನ್ನು ವಶಕ್ಕೆ ಪಡೆಯಲಾಗಿದೆ.
ಯುಎಸ್ ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್ ಪ್ರಧಾನ ಕಛೇರಿಯ ಬಳಿ ಸೋಮವಾರ ಮುಂಜಾನೆ ಕೋಳಿ ಪತ್ತೆಯಾಗಿದೆ ಎಂದು ವರ್ಜೀನಿಯಾದ ಆರ್ಲಿಂಗ್ಟನ್‌ನ ಪ್ರಾಣಿ ಕಲ್ಯಾಣ ಲೀಗ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ.
ಕೋಳಿಯು ರಸ್ತೆಯನ್ನು ದಾಟಿ ಪೆಂಟಗನ್‌ಗೆ ತೆರಳಿದೆ. ಕೋಳಿಯನ್ನು ಗಮನಿಸಿದ ಅಧಿಕಾರಿಗಳು ಕೂಡಲೇ ವಶಕ್ಕೆ ತೆಗೆದುಕೊಂಡಿದ್ದರು. ನಂತರ ಕೋಳಿಯನ್ನು ಸಾರ್ಜೆಂಟ್ ಬಲ್ಲೆನಾ ಅವರು ಸುರಕ್ಷಿತವಾಗಿ ಆಶ್ರಯಕ್ಕೆ ಕರೆತಂದಿದ್ದಾರೆ. ಅಲ್ಲಿ ಅವರು ಹೆಣ್ಣು ಕೋಳಿಗೆ ಹೊಸ ಮನೆಯನ್ನು ಕಂಡುಕೊಳ್ಳಲಿರುವುದಾಗಿ ಸಂಘಟನೆ ಹೇಳಿದೆ.
ಸಂಸ್ಥೆಯ ವಕ್ತಾರರಾದ ಚೆಲ್ಸಿಯಾ ಜೋನ್ಸ್, ಕೋಳಿಯು ಎಲ್ಲಿ ಕಂಡುಬಂತು ಎಂಬುದನ್ನು ನಿಖರವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕೋಳಿ ಎಲ್ಲಿಂದ ಬಂತು ಅಥವಾ ಅದು ಪೆಂಟಗನ್‌ಗೆ ಹೇಗೆ ಬಂತು ಎಂಬುದು ಕೂಡ ಅಸ್ಪಷ್ಟವಾಗಿದೆ.
ಕಂದು ಬಣ್ಣದ ಗರಿಗಳು ಮತ್ತು ಕೆಂಪು ಮೈಬಣ್ಣ ಹೊಂದಿರುವ ಕೋಳಿಗೆ ಇದೀಗ ಹೆನ್ನಿ ಪೆನ್ನಿ ಎಂದು ಹೆಸರಿಡಲಾಗಿದೆ. ಪಶ್ಚಿಮ ವರ್ಜೀನಿಯಾದಲ್ಲಿ ಸಣ್ಣ ಫಾರ್ಮ್ ಹೊಂದಿರುವ ಸಿಬ್ಬಂದಿಯೊಬ್ಬರು ಹೆನ್ನಿ ಪೆನ್ನಿಯನ್ನು ದತ್ತು ತೆಗೆದುಕೊಳ್ಳುತ್ತಿದ್ದಾರೆ ಎಂದು ಜೋನ್ಸ್ ಹೇಳಿದ್ದಾರೆ.