ಹಿಂದೂ ಧರ್ಮದಲ್ಲಿ ಪೂರ್ವಜರಿಗೂ ಮಹತ್ವದ ಸ್ಥಾನವಿದೆ. ಅವರು ಸಂತೋಷವಾಗಿದ್ರೆ ಸುಖ, ಶಾಂತಿ ಪ್ರಾಪ್ತಿ ಎಂದು ಜನರು ನಂಬಿದ್ದಾರೆ. ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ತರ್ಪಣ, ಶ್ರಾದ್ಧ ಮಾಡುವ ಪದ್ಧತಿಯಿದೆ. ಪಿತೃ ಪಕ್ಷ 15 ದಿನಗಳ ಕಾಲ ಪೂರ್ವಜರನ್ನು ಜನರು ತೃಪ್ತಿಪಡಿಸುವ ಪ್ರಯತ್ನ ನಡೆಸ್ತಾರೆ. ಈ ಬಾರಿ ಸೆಪ್ಟೆಂಬರ್ 10ರಿಂದ ಪಿತೃ ಪಕ್ಷ ಆರಂಭವಾಗ್ತಿದೆ. ಸೆಪ್ಟೆಂಬರ್ 25 ರಂದು ಕೊನೆಗೊಳ್ಳಲಿದೆ. ಪಿತೃ ಪಕ್ಷದಲ್ಲಿ ಪೂರ್ವಜರು ಭೂಮಿಗೆ ಬಂದು ತಮ್ಮ ಕುಟುಂಬ ಸದಸ್ಯರೊಂದಿಗೆ ಆಹಾರ ಸೇವನೆ ಮಾಡ್ತಾರೆಂಬ ನಂಬಿಕೆಯೂ ಇದೆ. ಹಾಗಾಗಿ ಈ ಸಮಯದಲ್ಲಿ ಅವರಿಗೆ ನೋವಾಗುವಂತಹ ಕೆಲಸವನ್ನು ಮಾಡಬಾರದು. ಒಂದ್ವೇಳೆ ನಮ್ಮ ಕೆಲಸದಿಂದ ಪಿತೃಗಳು ಕೋಪಗೊಂಡಿದ್ದರೆ ಅವರು ಕೆಲ ಚಿಹ್ನೆ ಮೂಲಕ ಇದನ್ನು ವ್ಯಕ್ತಪಡಿಸ್ತಾರೆ ಎನ್ನಲಾಗಿದೆ.
ಶ್ರಮವಹಿಸಿ ದಿನವಿಡಿ ಕೆಲಸ ಮಾಡಿದ್ರೂ ಫಲ ಪ್ರಾಪ್ತಿಯಾಗ್ತಿಲ್ಲ ಎಂದಾದ್ರೆ ನಿಮಗೆ ಪಿತೃ ದೋಷವಿದೆ ಎಂದರ್ಥ. ನಿಮ್ಮ ಮೇಲೆ ನಿಮ್ಮ ಹಿರಿಯರು ಕೋಪಗೊಂಡಿದ್ದಾರೆ ಎಂದು ಅರ್ಥೈಸಿಕೊಳ್ಳಿ.
ವ್ಯಕ್ತಿ ಸದಾ ಒತ್ತಡದಲ್ಲಿದ್ದರೆ ಅಥವಾ ಆತನ ಪ್ರಗತಿಗೆ ಸದಾ ಅಡ್ಡಿಯಾಗ್ತಿದ್ದರೆ ಕೂಡ ಪಿತೃಗಳು ಮುನಿಸಿಕೊಂಡಿದ್ದಾರೆ ಎಂಬ ಸೂಚನೆಯಾಗಿದೆ.
ವೈವಾಹಿಕ ಜೀವನದಲ್ಲಿ ಸಮಸ್ಯೆಯಾಗ್ತಿದ್ದರೆ ಇಲ್ಲವೆ ವಿವಾಹಕ್ಕೆ ಅಡ್ಡಿಯಾಗ್ತಿದ್ದರೆ, ಪದೇ ಪದೇ ಮದುವೆ ಮುಂದೂಡುತ್ತಿದ್ದರೆ ಕೂಡ ನಿಮ್ಮ ಹಿರಿಯರು ಮುನಿಸಿಕೊಂಡಿದ್ದಾರೆ ಎಂಬುದು ಖಚಿತ.
ಪೂರ್ವಜರು ಕೋಪಗೊಂಡಾಗ ಪೂಜೆಯ ಶುಭ ಫಲ ನಿಮಗೆ ಪ್ರಾಪ್ತಿಯಾಗುವುದಿಲ್ಲ.
ಕನಸಿನಲ್ಲಿ ಪದೇ ಪದೇ ನಿಮ್ಮ ಪೂರ್ವಜರು ಕಾಣಿಸಿಕೊಳ್ತಿದ್ದರೆ ಕೂಡ ಅವರು ಅಸಮಾಧಾನಗೊಂಡಿದ್ದಾರೆ ಎಂದುಕೊಳ್ಳಬಹುದು.
ಅನೇಕ ಬಾರಿ ಮಕ್ಕಳ ಸಮಸ್ಯೆಗೂ ಪಿತೃ ದೋಷವೇ ಕಾರಣವಾಗಿರುತ್ತದೆ. ಹಾಗಾಗಿ ಪಿತೃಗಳು ಮುನಿಸಿಕೊಳ್ಳುವಂತಹ ಕೆಲಸವನ್ನು ಮಾಡಬಾರದು.