
ಶುದ್ಧ ಮನಸ್ಸಿನಿಂದ ಮಾಡಿದ ಪೂಜೆಗೆ ಭಗವಂತ ಬೇಗ ಕರುಣೆ ತೋರುತ್ತಾನಂತೆ. ಪೂಜೆ ಮಾಡುವ ವೇಳೆ ಕೆಲವೊಂದು ಘಟನೆಗಳು ನಡೆಯುತ್ತವೆ. ಇದು ಮುಂದಾಗುವ ಘಟನೆಗಳ ಸಂಕೇತವನ್ನು ನೀಡುತ್ತವೆ. ಕೆಲವೊಂದು ಘಟನೆಗಳು ಆಪತ್ತಿನ ಬಗ್ಗೆ ಸಂಕೇತ ನೀಡಿದ್ರೆ ಮತ್ತೆ ಕೆಲವು ಸಂಕೇತಗಳು ಶುಭ ಸಂಕೇತಗಳನ್ನು ನೀಡುತ್ತವೆ.
ಪೂಜೆ ಮಾಡುವ ವೇಳೆ ಅಗರಬತ್ತಿ ಹೊಗೆ ಮನೆಯಲ್ಲೆ ತುಂಬಿದ್ರೆ, ಸಕಾರಾತ್ಮಕ ಶಕ್ತಿ ನಿಮ್ಮ ಮನಸ್ಸಿನಲ್ಲಿ ಮೂಡಿದ್ರೆ ಕೆಲವೇ ದಿನಗಳಲ್ಲಿ ಅದೃಷ್ಟ ನಿಮ್ಮ ಕೈಹಿಡಿಯುತ್ತವೆ ಎಂದರ್ಥ.
ಪೂಜೆ ಮಾಡುವ ವೇಳೆ ಮುಖ್ಯ ದ್ವಾರದ ಮುಂದೆ ಭಿಕ್ಷುಕ ಬಂದ್ರೆ ಸ್ವತಃ ಭಗವಂತ ಬಂದಿದ್ದಾನೆ ಎಂದರ್ಥೈಸಿಕೊಳ್ಳಿ. ನಿಮ್ಮ ಕೈನಲ್ಲಾದಷ್ಟು ಹಣವನ್ನು ದಾನ ಮಾಡಿ.
ಪೂಜೆ ಮಾಡುವ ವೇಳೆ ದೀಪದ ಬೆಳಕು ಏಕಾಏಕಿ ದೊಡ್ಡದಾದ್ರೆ ಇದು ಶುಭ ಸಂಕೇತ. ಒಂದು ವೇಳೆ ಅಗರಬತ್ತಿ ಹೊಗೆಯಲ್ಲಿ ‘ಓಂ’ ಚಿತ್ರ ಮೂಡಿದ್ರೆ ಇದು ಕೂಡ ಭಗವಂತ ನಿಮ್ಮ ಮೇಲೆ ಕೃಪೆ ತೋರಿದ್ದಾನೆ ಎಂದರ್ಥ.
ದೇವರ ಪೂಜೆ ಮಾಡುವ ವೇಳೆ ಹೂಗಳನ್ನು ದೇವರ ಮೇಲೆ ಹಾಕ್ತೇವೆ. ಪೂಜೆ ಮಾಡುತ್ತಿದ್ದ ವೇಳೆ ಹೂ ನಿಮ್ಮ ಕಡೆ ಬಿದ್ರೆ ನಿಮ್ಮ ಮೇಲೆ ಭಗವಂತ ಕರುಣೆ ತೋರಿದ್ದಾನೆ ಎಂದುಕೊಳ್ಳಿ. ಕೆಲವೇ ದಿನಗಳಲ್ಲಿ ನಿಮ್ಮ ಅದೃಷ್ಟ ಬದಲಾಗೋದ್ರಲ್ಲಿ ಎರಡು ಮಾತಿಲ್ಲ.