ವೈಷ್ಣವ ಪುರಾಣದಲ್ಲಿ ಭಗವಂತ ವಿಷ್ಣು ಹಾಗೂ ಶ್ರೀಕೃಷ್ಣನ ಮಹಿಮೆಯನ್ನು ಹೇಳಲಾಗಿದೆ. ಇದನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಇದ್ರಲ್ಲಿ ಅನೇಕ ಸಂಗತಿಗಳ ಬಗ್ಗೆ ಹೇಳಲಾಗಿದೆ. ಪೂಜೆಗೆ ಸಂಬಂಧಿಸಿದ ಯಾವ ವಸ್ತುಗಳನ್ನು ನೆಲಕ್ಕಿಡಬಾರದು ಎಂಬುದನ್ನು ಇದ್ರಲ್ಲಿ ಹೇಳಲಾಗಿದೆ.
ವೈಷ್ಣವ ಪುರಾಣದ ಪ್ರಕಾರ, ದೀಪ, ಶಿವಲಿಂಗ, ಸಾಲಿಗ್ರಾಮ, ದೇವಿ-ದೇವರ ಮೂರ್ತಿ, ಜನಿವಾರ, ಶಂಖವನ್ನು ಅಪ್ಪಿತಪ್ಪಿಯೂ ಕೆಳಗೆ ನೆಲಕ್ಕೆ ಇಡಬಾರದಂತೆ. ಬಟ್ಟೆ ಮೇಲೆ ಅಥವಾ ಎತ್ತರದ ಸ್ಥಳದಲ್ಲಿ ಇದನ್ನು ಇಡಬೇಕಂತೆ.
ಬೆಳಿಗ್ಗೆ ಏಳುತ್ತಿದ್ದಂತೆ ಎರಡೂ ಕೈಗಳ ರೇಖೆಗಳನ್ನು ನೋಡಿಕೊಂಡು, ಕರಾಗ್ರೆ ಮಂತ್ರ ಜಪಿಸಬೇಕು. ನಂತ್ರ ನಿತ್ಯಕರ್ಮ ಮುಗಿಸಿ ಸ್ನಾನ ಮಾಡಬೇಕು. ಎದ್ದ ನಂತ್ರ ತುಂಬಾ ಸಮಯ ಸ್ನಾನ ಮಾಡದೆ ಇರಬಾರದು. ರಾತ್ರಿ ಧರಿಸಿದ ಬಟ್ಟೆಯನ್ನು ಆದಷ್ಟು ಬೇಗ ಬದಲಿಸಬೇಕು.
ಯಾವುದೇ ಪರಿಸ್ಥಿತಿಯಲ್ಲೂ ತಂದೆ, ತಾಯಿ, ಮಗ, ಮಗಳು, ಪತ್ನಿ, ಗುರು, ಅನ್ಯ ಮಹಿಳೆ, ಸಹೋದರಿ, ಸಹೋದರ, ದೇವಿ-ದೇವತೆ ಹಾಗೂ ಜ್ಞಾನಿಗಳನ್ನು ನಿಂದಿಸಬಾರದು. ಇವ್ರನ್ನು ನಿಂದಿಸಿ, ಅಗೌರವ ತೋರಿದ್ರೆ ಕುಬೇರ ಕೂಡ ಭಿಕ್ಷುಕನಾಗ್ತಾನೆ.
ದಾನ ನೀಡುವುದಾಗಿ ಭರವಸೆ ನೀಡಿದ್ದರೆ ಭರವಸೆ ನೀಡಿದ ದಿನ ದಾನ ನೀಡಬೇಕು. ಒಂದು ದಿನ ಹೆಚ್ಚಾದ್ರೂ ದುಪ್ಪಟ್ಟು ದಾನ ನೀಡಬೇಕು.