ದೇವರ ಮನೆಯ ಪಾತ್ರೆಗಳನ್ನು ತೊಳೆಯುವುದೇ ತುಸು ಕಷ್ಟದ ಕೆಲಸ. ಯಾಕೆಂದರೆ ಹಣತೆ, ಆರತಿ ತಟ್ಟೆ, ತೀರ್ಥದ ಬಟ್ಟಲು ಹೀಗೆ ಎಲ್ಲವನ್ನೂ ಎಷ್ಟೇ ತಿಕ್ಕಿದರೂ ಹೊಳೆಯುವುದಿಲ್ಲ ಎಂದು ಕೆಲವರು ಹೇಳುತ್ತಿರುತ್ತಾರೆ. ದೇವರ ಮನೆಯಲ್ಲಿರುವ ತಾಮ್ರದ ಪಾತ್ರೆಗಳು ಪಳಪಳನೆ ಹೊಳೆಯಬೇಕೆಂದರೆ ಹೀಗೆ ಮಾಡಿ.
ಒಂದು ಬೌಲ್ ತೆಗೆದುಕೊಂಡು ಅದಕ್ಕೆ 2 ಚಮಚ ವಿನೇಗರ್, 2 ಚಮಚ ಲಿಂಬೆಹಣ್ಣಿನ ಹಣ್ಣಿನ ರಸ, 1 ಚಮಚ ಬೇಕಿಂಗ್ ಸೋಡಾ, 1 ಚಮಚ ಯಾವುದಾದರೂ ಡಿಶ್ ವಾಶರ್ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಂದು ಬ್ರಶ್ ನ ಸಹಾಯದಿಂದ ಪಾತ್ರೆಗಳನ್ನು ಉಜ್ಜಿ ಎರಡು ಸಲ ಚೆನ್ನಾಗಿ ತೊಳೆಯಿರಿ. ಇದರಿಂದ ಪಾತ್ರೆ ಹೊಳೆಯುತ್ತದೆ.
ಹಾಗೇ ಒಂದು ಬೌಲ್ ಗೆ 2 ಚಮಚ ಸಬೀನಾ ಪೌಡರ್, ನೆಲ್ಲಿಕಾಯಿ ಗಾತ್ರದ ಹುಣಸೇಹಣ್ಣು ಇವರೆಡನ್ನೂ ಒಟ್ಟಿಗೆ ಸೇರಿಸಿಕೊಂಡು ಇದರಿಂದ ತಾಮ್ರದ ಪಾತ್ರೆಗಳನ್ನು ತೊಳೆದರೆ ಪಾತ್ರೆಗಳು ಮಿಂಚುತ್ತದೆ.