ಕಳೆದ ಎರಡು ಮೂರು ವರ್ಷಗಳಿಂದಲೂ ಫಾರಂ ಕಂಡುಕೊಳ್ಳಲು ಸಾಧ್ಯವಾಗದೇ, ದೊಡ್ಡ ಇನಿಂಗ್ಸ್ ಕಟ್ಟಲು ಹೆಣಗಾಡುತ್ತಿರುವ ಚೇತೇಶ್ವರ ಪೂಜಾರಾ ಮತ್ತು ಅಜಿಂಕ್ಯಾ ರಹಾನೆರನ್ನು ಭಾರತ ಟೆಸ್ಟ್ ತಂಡದಿಂದ ಕೈ ಬಿಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಗ್ರಹಿಸಿದ್ದಾರೆ.
’ಪುರಾನೇ’ ಎಂಬ ಹ್ಯಾಶ್ಟ್ಯಾಗ್ ಅಡಿ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಆರು ಇನಿಂಗ್ಸ್ಗಳಲ್ಲಿ ಇಬ್ಬರೂ ತಲಾ ಐದು ಇನಿಂಗ್ಸ್ಗಳಲ್ಲಿ ವೈಫಲ್ಯ ಅನುಭವಿಸಿರುವುದು, ಹಿರಿಯ ಆಟಗಾರರಿಗೆ ಭಾರತ ತಂಡದ ಪರ ಇನ್ನು ಮುಂದೆ ಪ್ರತಿನಿಧಿಸುವ ಅವಕಾಶ ಸಿಗುವ ಸಾಧ್ಯತೆ ಇಲ್ಲವೆಂದೇ ಹೇಳಲಾಗುತ್ತಿದೆ.
ಬಹಿರಂಗವಾಯ್ತು ಉದ್ಯಮಿ ಪತ್ನಿ -ಮಾಜಿ ಕ್ರಿಕೆಟಿಗನ ಸೆಕ್ಸ್ ವಿಡಿಯೋ
ಅದರಲ್ಲೂ ಹನುಮ ವಿಹಾರಿ, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ಶ್ರೀಲಂಕಾ ವಿರುದ್ಧ ಫೆಬ್ರವರಿ-ಮಾರ್ಚ್ನಲ್ಲಿ ಹಮ್ಮಿಕೊಂಡಿರುವ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಹನ್ನೊಂದರ ಬಳಗ ಸೇರಲು ಕದ ತಟ್ಟುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಆಡಿದ ಆರು ಇನಿಂಗ್ಸ್ಗಳಲ್ಲಿ ರಹಾನೆ 22.66 ಸರಾಸರಿಯಲ್ಲಿ 136 ರನ್ ಗಳಿಸಿರುವುದು, ಪೂಜಾರಾ 20.66ರ ಸರಾಸರಿಯಲ್ಲಿ 124 ರನ್ ಗಳಿಸಿರುವುದು ಇಬ್ಬರ ಟೆಸ್ಟ್ ವೃತ್ತಿ ಜೀವನ ಅಂತ್ಯಕ್ಕೆ ಬುನಾದಿಯಾಗಲಿದೆ ಎನ್ನಲಾಗಿದ್ದು, ಮುಂಬರುವ ಸರಣಿಗಳಿಗೆ ಟೆಸ್ಟ್ ತಂಡದ ಆಯ್ಕೆ ವೇಳೆ ಆಯ್ಕೆದಾರ ಚೇತನ್ ಶರ್ಮಾ ನೇತೃತ್ವದ ಸಮಿತಿ ಇಬ್ಬರ ವಿಚಾರದಲ್ಲಿ ಇನ್ನು ಹೆಚ್ಚಿನ ತಾಳ್ಮೆ ತೋರುವುದು ಅಸಾಧ್ಯವೆಂದೇ ಹೇಳಲಾಗಿದೆ.