ಭಾರತೀಯ ಮೂಲದ ವ್ಯಕ್ತಿಯೊಬ್ಬ ಅಮೆರಿಕದ ನ್ಯೂಯಾರ್ಕ್ ರೋಡ್ ನಲ್ಲಿ ಸ್ಕರ್ಟ್ ಧರಿಸಿ ಡ್ಯಾನ್ಸ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಜೈನಿಲ್ ಮೆಹ್ತಾ ಎಂದು ಗುರುತಿಸಲಾದ ವ್ಯಕ್ತಿಯು ಗುಜರಾತ್ ಮೂಲದವರಾಗಿದ್ದು, ನ್ಯೂಯಾರ್ಕ್ನಲ್ಲಿ ನೆಲೆಸಿದ್ದಾರೆ. ಅವರು ನೃತ್ಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಫ್ಲೋ ಸ್ಕರ್ಟ್ ಧರಿಸಿ ಬಾಲಿವುಡ್ ಹಾಡುಗಳಿಗೆ ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ನೃತ್ಯ ಮಾಡಿದ್ದಾರೆ.
ರಸ್ತೆಯಲ್ಲಿ ನೃತ್ಯ ಮಾಡಿರುವ ವಿಡಿಯೋವನ್ನು ಅವರು ತನ್ನ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಪುಷ್ಪಾ ಸಿನಿಮಾದ ಜನಪ್ರಿಯ ಹಾಡಾದ ಸಾಮಿ ಸಾಮಿಗೆ ಅವರು ಅದ್ಭುತವಾಗಿ ಸ್ಟೆಪ್ಸ್ ಹಾಕಿದ್ದಾರೆ. ವಿಡಿಯೋವನ್ನು ಕೆಲವು ದಿನಗಳ ಹಿಂದೆ ಪೋಸ್ಟ್ ಮಾಡಲಾಗಿದ್ದು, ಇದು 2.6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.
ಶರ್ಟ್ ಧರಿಸಿರುವ ಅವರು ಸೊಂಟದ ಸುತ್ತಲೂ ಹಳದಿ ದುಪಟ್ಟಾ ಮತ್ತು ಸುಂದರವಾದ ಘಾಗ್ರಾ ಸ್ಕರ್ಟ್ ಧರಿಸಿ, ಜೈನಿಲ್ ಬ್ರೂಕ್ಲಿನ್ನ ಡಂಬೋದಲ್ಲಿ ನೃತ್ಯ ಮಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಜೈನಿಲ್ ಅವರು ಹಾಡಿನ ನೃತ್ಯದ ಚಲನೆಯನ್ನು ಮರುಸೃಷ್ಟಿಸಿದ್ದಾರೆ. ಈ ವಿಡಿಯೋ ನೆಟ್ಟಿಗರ ಮನಗೆದ್ದಿದೆ.
ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ, ಜೈನಿಲ್ ಅವರು ಚಿಕ್ಕ ವಯಸ್ಸಿನಲ್ಲಿ ಸ್ಕರ್ಟ್ಗಳಲ್ಲಿ ಹೇಗೆ ನೃತ್ಯ ಮಾಡಲು ಪ್ರಾರಂಭಿಸಿದ್ದರು ಮತ್ತು ಅವರ ಕುಟುಂಬವು ಹೇಗೆ ಬೆಂಬಲಿಸಿದ್ರು ಎಂಬ ಕಥೆಯನ್ನು ಹಂಚಿಕೊಂಡಿದ್ದಾರೆ.
ತಾನು 7 ವರ್ಷದವನಾಗಿದ್ದಾಗ ನೃತ್ಯ ಅಭ್ಯಸಿಸಿರುವುದಾಗಿ ಅವರು ಹೇಳಿದ್ದಾರೆ. ತನ್ನ ತಾಯಿಯ ದುಪಟ್ಟಾಗಳು ಮತ್ತು ಸ್ಕರ್ಟ್ಗಳನ್ನು ಕದ್ದು, ಕೋಣೆಗೆ ಬೀಗ ಹಾಕುತ್ತಿದ್ದೆ. ಕೆಲವು ರೊಮ್ಯಾಂಟಿಕ್ ಸಂಗೀತವನ್ನು ನುಡಿಸುತ್ತಿದ್ದೆ ಎಂದು ಹೇಳಿದ್ದಾರೆ.