
ಎಲ್ಲೆಲ್ಲೂ ಗಣೇಶ ಹಬ್ಬದ್ದೇ ಸಂಭ್ರಮ ಸಡಗರ, ವಿಘ್ನನಾಶಕನ ದರ್ಶನ ಪಡೆದು ಭಕ್ತರು ಪುನೀತರಾಗುತ್ತಿದ್ದಾರೆ. ಅದರಲ್ಲೂ ಕೊರೊನಾ ಕಾಲ 2ವರ್ಷದ ನಂತರ ಬಂದ ಹಬ್ಬವಾದ್ದರಿಂದ ಭಕ್ತರು ಈ ಹಬ್ಬವನ್ನ ಭರ್ಜರಿಯಾಗಿ ಆಚರಿಸುತ್ತಿದ್ದಾರೆ. ಪ್ರತಿವರ್ಷದಂತೆಯೇ ಈ ವರ್ಷವೂ ಗಣೇಶ ಭಿನ್ನ ಭಿನ್ನ ರೂಪ ತಾಳಿ ನಿಂತಿರುವುದನ್ನ ಗಮನಿಸಬಹುದು. ಈ ಬಾರಿ ಗಣೇಶ ಪುಷ್ಪರಾಜ್ ಸ್ಟೈಲ್‌ನಲ್ಲಿ ಮಿಂಚುತ್ತಿರುವುದು ವಿಶೇಷ.
ದಕ್ಷಿಣ ಚಿತ್ರರಂಗದ ಖ್ಯಾತ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ ‘ಪುಷ್ಪ: ದಿ ರೈಸ್’ ಬಿಡುಗಡೆಯಾದ ದಿನದಿಂದಲೇ ಬಾಕ್ಸ್ ಆಫಿಸ್ ನಲ್ಲಿ ಭಾರಿ ಧೂಳೇಬ್ಬಿಸಿದ ಸಂಗತಿ ನಿಮಗೆಲ್ಲರಿಗೂ ತಿಳಿದೇ ಇದೆ. ಚಿತ್ರದಲ್ಲಿ ಪುಷ್ಪಾ ಅವರ ‘ಝುಖೇಗಾ ನಹಿ’ ಸ್ಟೈಲ್ ಭಾರೀ ಮೆಚ್ಚುಗೆ ಪಡೆದಿದೆ. ಇದೀಗ ಗಣಪತಿ ಹಬ್ಬದಲ್ಲೂ ಗಣೇಶನ ಮೂತಿ ಪುಷ್ಪರಾಜ್ ಅವತಾರವನ್ನ ಎತ್ತಿರುವುದನ್ನ ನೋಡಬಹುದಾಗಿದೆ. ಕೆಲವು ಕಡೆಗಳಲ್ಲಂತೂ ಗಣೇಶನ ವಿಗ್ರಹಗಳು, ಪುಷ್ಪನ ರೀತಿಯಲ್ಲಿ ಗಡ್ಡದ ಮೇಲೆ ಕೈತಿರುಗಿಸುವ ಲುಕ್ ನೀಡಲಾಗಿದೆ. ಇದೇ ಗಣೇಶನ ಮೂರ್ತಿ ಈಗ ಸೋಶಿಯಲ್‌ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
‘ಪುಷ್ಪ: ದಿ ರೈಸ್’ ಬಿಡುಗಡೆಯಾದಾಗಿನಿಂದ ಅಲ್ಲು ಅರ್ಜುನ್ ಬಗ್ಗೆ ಪ್ರೇಕ್ಷಕರಲ್ಲಿ ಅಸಾಧಾರಣ ಕ್ರೇಜ್ ನಿರ್ಮಾಣಗೊಂಡಿದೆ. ಈ ಚಿತ್ರ ಭಾರೀ ಟ್ರೆಂಡನ್ನೇ ಸೃಷ್ಟಿಸಿದೆ. ಪುಷ್ಪಾ ಮಾತಾಡುವ ಶೈಲಿ ಅಷ್ಟೇ ಅಲ್ಲ ಪುಷ್ಪಾ ರಾಜ್ ಬಾಡಿ ಲ್ಯಾಂಗ್ವೇಜ್ ಕೂಡ ಭಾರಿ ಟ್ರೆಂಡ್ ಸೃಷ್ಟಿಸಿದೆ.
ಇದೀಗ ಗಣಪತಿ ಹಬ್ಬ ಸಮೀಪಿಸುತ್ತಿದ್ದಂತೆ ಗಣಪತಿ ವಿಗ್ರಹಗಳಿಗೂ ಕೂಡ ಪುಷ್ಪ ರಾಜ್ ಫೀವರ್ ಆವರಿಸತೊಡಗಿದೆ. ಗಣಪತಿ ಹಬ್ಬವು ಸಾರ್ವಜನಿಕರಲ್ಲಿ ಅತ್ಯಂತ ಸಂಭ್ರಮದ ಹಬ್ಬವಾಗಿದೆ. ಈ ವರ್ಷ ಪುಷ್ಪರಾಜ್ ಶೈಲಿಯಲ್ಲಿ ಮೂರ್ತಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಎಲ್ಲಿ ನೋಡಿದಲೆಲ್ಲಾ ಅಂತಹ ವಿಗ್ರಹಗಳು ಕಂಡುಬಂದಿವೆ, ಅವುಗಳಲ್ಲಿ ಗಣಪತಿ ಪುಷ್ಪರಾಜ್ ಶೈಲಿಯಲ್ಲಿ ಕುಳಿತಿರುವುದು ಕಂಡುಬಂದಿದೆ.
ಇದು ಅಲ್ಲು ಅರ್ಜುನ್‌ನ ಕ್ರೇಜ್ ಮತ್ತು ಸ್ಟಾರ್‌ಡಮ್‌ಗೆ ಜೀವಂತ ಉದಾಹರಣೆಯಾಗಿದೆ. ಇಷ್ಟು ದಿನ ಕಳೆದರೂ ಸ್ಟೈಲಿಶ್ ಸ್ಟಾರ್ ಕ್ರೇಜ್ ಕಮ್ಮಿ ಕಾಣದೇ ಸದಾ ಜನಪ್ರಿಯತೆಯ ಹೊಸ ಉದಾಹರಣೆಗಳನ್ನು ನಿರ್ಮಿಸುತ್ತಿರುವುದು ಜನರಲ್ಲಿ ನಿಜಕ್ಕೂ ಅಚ್ಚರಿ ಮೂಡಿಸಿದೆ.