ಕಾಂಗ್ರೆಸ್ ನಾಯಕ ಉದಿತ್ ರಾಜ್, ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಟ್ವೀಟ್ ಒಂದನ್ನು ಮಾಡಿದ್ದಾರೆ. ಅಧಿಕಾರ ದಾಹಿಯಾದ ಪ್ರಧಾನಿ ನರೇಂದ್ರ ಮೋದಿಯು ಪುಲ್ವಾಮಾ ಭಯೋತ್ಪಾದಕ ದಾಳಿಗೆ ಯೋಜನೆ ರೂಪಿಸಿದ್ದರು ಎಂದು ಹೇಳಿದ್ದಾರೆ.
ಟ್ವೀಟ್ನಲ್ಲಿ ಮಾಜಿ ಐಆರ್ಎಸ್ ಅಧಿಕಾರಿ, ಪ್ರಧಾನಿ ಮೋದಿ ಭದ್ರತಾ ಉಲ್ಲಂಘನೆಯ ನಾಟಕವಾಡಿದ್ದಾರೆ ಎಂದು ಜರಿದಿದ್ದಾರೆ. 40 ಸಿಆರ್ಪಿಎಫ್ ಯೋಧರ ಜೀವ ತೆಗೆದ ಭೀಕರ ಭಯೋತ್ಪಾದನಾ ದಾಳಿಯ ಹಿಂದೆ ಪ್ರಧಾನಿ ಮೋದಿಯ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ರಾಜ್, ಸಿಆರ್ಪಿಎಫ್ ಯೋಧರಿಗೆ ಬೆಂಗಾವಲು ಪಡೆಗಳಲ್ಲಿ ಪ್ರಯಾಣಿಸುವಂತೆ ಏಕೆ ಹೇಳಲಾಗಿತ್ತು..? ಅವರನ್ನು ಏಕೆ ಏರ್ಲಿಫ್ಟ್ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಉಗ್ರರ ದಾಳಿ ಬಗ್ಗೆ ಕೆಲವು ಪ್ರಶ್ನೆಗಳನ್ನು ಎತ್ತಿದ್ದರು. ಹುತಾತ್ಮರನ್ನು ಸ್ಮರಿಸಿದ ವಯನಾಡ್ ಸಂಸದ ರಾಹುಲ್ ಗಾಂಧಿ ಭದ್ರತಾ ಲೋಪಗಳ ಬಗ್ಗೆ ಏಕೆ ಹೊಣೆಗಾರಿಕೆ ನಿಗದಿ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ್ದರು.
ಪ್ರಧಾನಿ ಮೋದಿ ಭದ್ರತಾ ಉಲ್ಲಂಘನೆ ಬಗ್ಗೆ ಮಾತನಾಡಿದ್ದ ಅವರು, ಪ್ರಧಾನಿ ಮೋದಿಗೆ ಒಬ್ಬ ದಲಿತ ನಾಯಕ ಚರಣ್ಜೀತ್ ಸಿಂಗ್ ಪಂಜಾಬ್ನ ಸಿಎಂ ಆಗಿದ್ದು ಇಷ್ಟವಿರಲಿಲ್ಲ. ಹೀಗಾಗಿಯೇ ಅವರ ಮಾನಹಾನಿ ಮಾಡುವ ಸಲುವಾಗಿ ಭದ್ರತಾ ಲೋಪದ ನಾಟಕವಾಡಿದ್ದಾರೆ. ವಾರಣಾಸಿಗೆ ಹೋದ ಸಂದರ್ಭದಲ್ಲಿ ಜನರನ್ನು ಭೇಟಿ ಮಾಡಲೆಂದೇ ಬೆಂಗಾವಲು ವಾಹನವನ್ನು ಪ್ರಧಾನಿ ನಿಲ್ಲಿಸಿದ್ದರು. ಯಾಕೆ ಆಗ ಅವರಿಗೆ ಬೆದರಿಕೆಯ ಅನುಭವಾಗಿರಲಿಲ್ಲವೇ..? ಎಂದು ಪ್ರಶ್ನೆ ಮಾಡಿದರು.