ಪುರುಷ ಇರಲಿ ಮಹಿಳೆ ಇರಲಿ ಮಲಗುವ ಮೊದಲು ಕೆಲವೊಂದು ಕೆಲಸವನ್ನು ಅವಶ್ಯವಾಗಿ ಮಾಡಬೇಕು. ಹಾಗೆ ಮಾಡಿದಲ್ಲಿ ಕುಟುಂಬ ಸಮಸ್ಯೆ, ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳು ದೂರವಾಗಲಿವೆ. ಶಾಸ್ತ್ರಗಳು ರಾತ್ರಿ ಮಲಗುವಾಗ ಏನು ಮಾಡಿದ್ರೆ ಯಾವ ಸಮಸ್ಯೆ ದೂರವಾಗುತ್ತದೆ ಎಂಬುದನ್ನು ಹೇಳಿವೆ.
ರಾತ್ರಿ ಮಲಗುವ ಮೊದಲು ಹಾಸಿಗೆ ಬಳಿ ತಾಮ್ರದ ಪಾತ್ರೆಯಲ್ಲಿ ನೀರನ್ನಿಟ್ಟು ಮಲಗಬೇಕು. ಬೆಳಿಗ್ಗೆ ಎದ್ದ ತಕ್ಷಣ ಯಾರೂ ತುಳಿಯದಂತ ಸ್ಥಳದಲ್ಲಿ ಅದನ್ನು ಹಾಕಬೇಕು. ಹೀಗೆ ಮಾಡಿದಲ್ಲಿ ಮಾನ-ಸನ್ಮಾನದಲ್ಲಿ ಆಗ್ತಾ ಇರುವ ಏರುಪೇರು, ಆರ್ಥಿಕ ಸಮಸ್ಯೆ, ರೋಗ ಹಾಗೂ ವಿವಾಹದಲ್ಲಿ ಆಗುತ್ತಿರುವ ತೊಂದರೆಗೆ ಪರಿಹಾರ ಸಿಗಲಿದೆ.
ಮಾನಸಿಕ ಸಮಸ್ಯೆ, ಭಯ ಹುಟ್ಟಿಸುವಂತಹ ಕನಸು ಬೀಳುತ್ತಿದ್ದರೆ ದಿಂಬಿನ ಬಳಿ ಮೂಲಂಗಿ ಇಟ್ಟು ಮಲಗಿರಿ. ಬೆಳಿಗ್ಗೆ ಶಿವನ ದೇವಸ್ಥಾನಕ್ಕೆ ಹೋಗಿ ಇದನ್ನು ಅರ್ಪಿಸಿ.
ದುರ್ಗಾ ಸಪ್ತಶತಿ ಪುಸ್ತಕವನ್ನು ದಿಂಬಿನ ಬಳಿ ಇಟ್ಟು ಮಲಗುವುದರಿಂದ ಭಯ, ಆತಂಕ ದೂರವಾಗುತ್ತದೆ.
ಸಂತಾನ ಬಯಸುವ ದಂಪತಿ ಬೆಳ್ಳಿ ಪಾತ್ರೆಯಲ್ಲಿ ಹಾಲು ಬಿಸಿ ಮಾಡಿ ರಾತ್ರಿ ಮಲಗುವಾಗ ಸೇವನೆ ಮಾಡಬೇಕು.
ಶನಿಯ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ದಿಂಬಿನ ಬಳಿ ತೆಂಗಿನಕಾಯಿ ಹಾಗೂ ಕಲ್ಲಿದ್ದಲನ್ನು ಇಟ್ಟು ಮಲಗಿರಿ. ಬೆಳಗ್ಗೆ ಪವಿತ್ರ ನದಿಯಲ್ಲಿ ಇದನ್ನು ಬಿಡಿ.