alex Certify ಪುರುಷರ ‘ಸೌಂದರ್ಯ’ಕ್ಕೆ ಇಲ್ಲಿದೆ ನೋಡಿ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುರುಷರ ‘ಸೌಂದರ್ಯ’ಕ್ಕೆ ಇಲ್ಲಿದೆ ನೋಡಿ ಟಿಪ್ಸ್

ಸೌಂದರ್ಯದ ವಿಷಯಕ್ಕೆ ಬಂದರೆ ಮಹಿಳೆಯರಷ್ಟೇ ಪುರುಷರೂ ಎಚ್ಚರಿಕೆಯಿಂದ ಇರುತ್ತಾರೆ. ಪುರುಷರ ಮುಖದ ಮೇಲೆ ಮೂಡುವ ಮೊಡವೆಗಳ ನಿವಾರಣೆ ಹೇಗೆಂದು ನೋಡೋಣ.

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ಗುಳ್ಳೆಗಳನ್ನು ನಿವಾರಿಸಲು ನೆರವಾಗುತ್ತದೆ. ಇದರ ಪ್ಯಾಕ್ ಮಾಡಿಕೊಳ್ಳುವುದು ಹೀಗೆ…

ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಈ ಮಿಶ್ರಣಕ್ಕೆ ನೀರು ಸೇರಿಸಿ ಪೇಸ್ಟ್ ಮಾಡಿ. ಈ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಳಿಕ ತೊಳೆಯಿರಿ. ಇದರಿಂದ ಮುಖದ ಮೊಡವೆ ಕಡಿಮೆಯಾಗುತ್ತದೆ.

ಪುದೀನಾ ಚರ್ಮದ ರಂಧ್ರಗಳನ್ನು ತೊಡೆದು‌ ಹಾಕಿ ಮೊಡವೆಗಳಿಗೆ ಚಿಕಿತ್ಸೆ ನೀಡುತ್ತದೆ. ಪುದೀನಾ ಎಲೆಯನ್ನು ಜಜ್ಜಿ ಅದಕ್ಕೆ ಓಟ್ ಮೀಲ್ ಸೇರಿಸಿ ಮಿಶ್ರಣ ಮಾಡಿ ಇದನ್ನು ಮುಖಕ್ಕೆ ಹಚ್ಚಿ 10 ನಿಮಿಷ ಬಳಿಕ ತಣ್ಣೀರಿನಿಂದ ತೊಳೆಯಿರಿ. ಇದು ನಿಮ್ಮ ತ್ವಚೆಯನ್ನು ತಾಜಾವಾಗಿಸುತ್ತದೆ.

ಮಂಜುಗಡ್ಡೆ ಕ್ಯೂಬ್ ಗಳನ್ನು ಕರವಸ್ತ್ರದಲ್ಲಿ ಕಟ್ಟಿ ಮೊಡವೆ ಇರುವ ಜಾಗಕ್ಕೆ ಇಡಿ. ನಿಧಾನವಾಗಿ ಮಸಾಜ್ ಮಾಡಿ. ಇದರಿಂದ ಚರ್ಮದ ರಂಧ್ರಗಳು ಮುಚ್ಚುತ್ತವೆ.

ಆಪಲ್ ಸೈಡರ್ ವಿನೆಗರ್ ಚರ್ಮಕ್ಕೆ ಅತ್ಯುತ್ತಮ ಆಯ್ಕೆ. ಇದು ಮೊಡವೆಯಿಂದಾದ ನೋವನ್ನು ಕಡಿಮೆ ಮಾಡುತ್ತದೆ. ನೀರಿಗೆ ಇದನ್ನು ಬೆರೆಸಿ ಹತ್ತಿಯನ್ನು ದ್ರಾವಣದಲ್ಲಿ ಅದ್ದಿ ಮೊಡವೆಯ ಮೇಲೆ ಹಚ್ಚಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...