ಸಿಹಿಗುಂಬಳ ಅಥವಾ ಚೀನಿಕಾಯಿಯ ಬೀಜದ ಸೇವನೆಯಿಂದ ಹಲವು ಪ್ರಯೋಜನಗಳಿವೆ. ಬೇಸಿಗೆಯಲ್ಲಿ ಇದನ್ನು ಒಣಗಿಸಿ ಇಟ್ಟುಕೊಂಡರೆ ಮಳೆಗಾಲದಲ್ಲಿ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. ಈಗ ಇವು ಮಳಿಗೆಗಳಲ್ಲು ಲಭ್ಯವಿದೆ.
ಇದರ ಸೇವನೆಯಿಂದ ಪುರುಷರು ಹಲವು ರೀತಿಯ ಪ್ರಯೋಜನಗಳನ್ನು ಪಡೆಯಬಹುದು ಎನ್ನುತ್ತದೆ ಸಂಶೋಧನೆ. ಅದರಲ್ಲೂ ಮುಖ್ಯವಾಗಿ ಸಿಹಿ ಗುಂಬಳದ ಬೀಜ ಸೇವನೆಯಿಂದ ಪ್ರಾಸ್ಟೇಟ್ ಗ್ರಂಥಿ ಬಲ ಪಡೆಯುತ್ತದೆ. ಪುರುಷರಲ್ಲಿ ಉತ್ತಮ ಗುಣಮಟ್ಟದ ಹಾರ್ಮೋನ್ ಗಳ ಬಿಡುಗಡೆಗೆ ಕಾರಣವಾಗುತ್ತದೆ.
ಪುರುಷರ ಫಲವತ್ತತೆ ಹೆಚ್ಚಿಸಲು ಇದು ಅತ್ಯುತ್ತಮ ಆಹಾರ ಎನ್ನಲಾಗಿದೆ. ವೀರ್ಯದ ಕೌಂಟ್ ಕಡಿಮೆ ಇರುವ ಪುರುಷರು ನಿತ್ಯ ಇದನ್ನು ಸೇವಿಸಿದರೆ ಹಲವು ಖಾಸಗಿ ಸಮಸ್ಯೆಗಳು ದೂರವಾಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.
ಇದರಲ್ಲಿ ಪ್ರೊಟೀನ್ ಸಮೃದ್ಧವಾಗಿದ್ದು ಹಲವು ಆರೋಗ್ಯ ಸಮಸ್ಯೆಗಳು ಇದು ದೂರವಿಡುತ್ತದೆ. ಅದರೆ ವಿಪರೀತ ಸೇವನೆ ಬೊಜ್ಜು ಬೆಳೆಯಲು ಕಾರಣವಾಗಬಹುದು ಎಂಬ ಎಚ್ಚರಿಕೆಯನ್ನೂ ನೀಡಿದೆ. ಹಾಗಾಗಿ ನಿಯಮಿತ ಪ್ರಮಾಣದಲ್ಲಿ ನಿತ್ಯ ಈ ಬೀಜವನ್ನು ಸೇವಿಸುವುದರಿಂದ ಹಲವು ಲಾಭಗಳನ್ನು ಪಡೆಯಬಹುದು.