ಟೆಸ್ಟೊಸ್ಟೆರೋನ್, ಪುರುಷರಲ್ಲಿ ಇರುವ ಸೆಕ್ಸ್ ಹಾರ್ಮೋನ್. ಈ ಹಾರ್ಮೋನ್ ಪುರುಷರ ಲೈಂಗಿಕ ಶಕ್ತಿಗೆ ಮತ್ತು ಮಾಂಸ ಖಂಡಗಳಿಗೆ ಬಹಳ ಮುಖ್ಯ. ಕೆಟ್ಟ ಜೀವನಶೈಲಿ ಹಾಗೂ ವಯಸ್ಸು, ಈ ಹಾರ್ಮೋನ್ ಕಡಿಮೆಯಾಗಲು ಕಾರಣವಾಗುತ್ತದೆ. ದೇಹದಲ್ಲಿ ಈ ಹಾರ್ಮೋನ್ ಹೆಚ್ಚಿಸಲು ಪುರುಷರು ಡಯಟ್ ನಲ್ಲಿ ಕೆಲ ಆಹಾರ ಸೇವನೆ ಮಾಡಬೇಕು.
ಟುನಾ ಮೀನು : ಟುನಾ ಮೀನಿನಲ್ಲಿ ವಿಟಮಿನ್ ಡಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ವಿಟಮಿನ್ ಡಿ ಟೆಸ್ಟೊಸ್ಟೆರೋನ್ ಉತ್ಪತ್ತಿಯಾಗಲು ಅವಶ್ಯವಾಗಿದೆ. ಈ ಮೀನಿನಲ್ಲಿ ಹೆಚ್ಚಿನ ಪ್ರಮಾಣದ ಪ್ರೊಟೀನ್ ಮತ್ತು ಕಡಿಮೆ ಕ್ಯಾಲೊರಿ ಇದೆ. ಟುನಾ ಮೀನಿನ ಹೊರತಾಗಿ ಸೈಲ್ಮನ್, ಸಾರ್ಡಿನ್ ಅಥವಾ ಶೆಲ್ ಮೀನುಗಳು ಕೂಡ ಟೆಸ್ಟೊಸ್ಟೆರೋನ್ ಪ್ರಮಾಣವನ್ನು ಹೆಚ್ಚಿಸುತ್ತವೆ. ವಾರದಲ್ಲಿ 2-3 ಬಾರಿ ಇದನ್ನು ಸೇವಿಸಬಹುದು.
ವಿಟಮಿನ್ ಡಿ ಹೊಂದಿರುವ ಕಡಿಮೆ ಫ್ಯಾಟ್ ಉಳ್ಳ ಹಾಲು, ಪ್ರೊಟೀನ್ ಮತ್ತು ಕ್ಯಾಲ್ಸಿಯಮ್ ಗಳ ಆಗರವಾಗಿದೆ. ಇದು ಮಾಂಸಖಂಡಗಳನ್ನು ಬಲಿಷ್ಠಗೊಳಿಸಿ ಟೆಸ್ಟೊಸ್ಟೆರೋನ್ ಹೆಚ್ಚಿಸುತ್ತದೆ. ಹಾಲನ್ನು ಖರೀದಿಸುವಾಗ ವಿಟಮಿನ್ ಡಿ ಹೆಚ್ಚಿರುವ ಮತ್ತು ಕಡಿಮೆ ಪ್ಯಾಟ್ ಹೊಂದಿರುವ ಹಾಲನ್ನು ಖರೀದಿಸಬೇಕು.
ಮೊಟ್ಟೆಯ ಹಳದಿ ಭಾಗದಲ್ಲಿ ಕೂಡ ಹೆಚ್ಚಿನ ಪ್ರಮಾಣದ ವಿಟಮಿನ್ ಡಿ ಇರುತ್ತದೆ. ಟೆಸ್ಟೊಸ್ಟೆರೋನ್ ಪ್ರಮಾಣ ಕಡಿಮೆ ಇದ್ದಲ್ಲಿ ಮೊಟ್ಟೆಯ ಹಳದಿ ಭಾಗ ಅದನ್ನು ಹೆಚ್ಚಿಸುತ್ತದೆ.
ಬೀನ್ಸ್ ಆರೋಗ್ಯಕ್ಕೆ ತುಂಬ ಒಳ್ಳೆಯದು. ಇದರಲ್ಲಿ ಪ್ರೊಟೀನ್, ಫೈಬರ್ ಅಂಶ ಹೆಚ್ಚಿದೆ. ಇದು ಟೆಸ್ಟೊಸ್ಟೆರೋನ್ ಅಂಶವನ್ನೂ ಹೆಚ್ಚಿಸುತ್ತದೆ.
ಸಾಮಾನ್ಯವಾಗಿ ಚಳಿಗಾಲದಲ್ಲಿ ಶುಂಠಿಯನ್ನು ಹೆಚ್ಚು ಬಳಸುತ್ತೇವೆ. 2012ರ ಒಂದು ಅಧ್ಯಯನದ ಪ್ರಕಾರ ಶುಂಠಿ ಟೆಸ್ಟೊಸ್ಟೆರೋನ್ ಪ್ರಮಾಣವನ್ನು ಶೇಕಡಾ 17.7 ರಷ್ಟು ಹೆಚ್ಚಿಸುತ್ತದೆ. ಇದು ಪುರುಷರ ಸ್ಪರ್ಮ್ ಗುಣಮಟ್ಟವನ್ನು ಹೆಚ್ಚಿಸುತ್ತದೆ.
ದಾಳಿಂಬೆ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದು ಪುರುಷರ ಟೆಸ್ಟೊಸ್ಟೆರೋನ್ ಪ್ರಮಾಣವನ್ನು ಹೆಚ್ಚಿಸಿ ರಕ್ತದೊತ್ತಡವನ್ನೂ ನಿಯಂತ್ರಣದಲ್ಲಿಡುತ್ತದೆ.