ಕೆಲ ಪುರುಷರ ಲೈಂಗಿಕ ಆಸಕ್ತಿ ಕಡಿಮೆಯಾಗ್ತಾ ಬರುತ್ತದೆ. ಇದಕ್ಕೆ ವಯಸ್ಸಿನ ಜೊತೆ ಒತ್ತಡ ಕೂಡ ಕಾರಣವಾಗುತ್ತದೆ. ಸಂತಾನ ಬಯಸುವ ಹಾಗೂ ಜೀವನ ಸಂಗಾತಿ ಜೊತೆ ಸುಖ ದಾಂಪತ್ಯ ಬಯಸುವ ಪುರುಷರ ಸೆಕ್ಸ್ ಲೈಫ್ ಚೆನ್ನಾಗಿರಬೇಕು. ಲೈಂಗಿಕ ಆಸಕ್ತಿ ಕಡಿಮೆಯಾದ್ರೆ ದಾಂಪತ್ಯದಲ್ಲಿ ಬಿರುಕು ಮೂಡುವ ಸಾಧ್ಯತೆಯಿರುತ್ತದೆ.
ಲೈಂಗಿಕಾಸಕ್ತಿ ಹೆಚ್ಚಿಸಿಕೊಳ್ಳ ಬಯಸುವ ಪುರುಷರು ಡಯೆಟ್ ನಲ್ಲಿ ಜಿನ್ಸೆಂಗ್ ಉಪಯೋಗಿಸಬೇಕು. ಜಿನ್ಸೆಂಗ್ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಶುಂಠಿಯಂತೆ ಕಾಣಿಸುವ ಒಂದು ಗಡ್ಡೆ ಜಿನ್ಸೆಂಗ್. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಾಗೂ ಸುಸ್ತು ನಿವಾರಿಸುವ ಶಕ್ತಿ ಇದಕ್ಕಿದೆ.
ಪುರುಷರ ಜೀರ್ಣಕ್ರಿಯೆಯನ್ನು ಸುಧಾರಿಸುವ ಜೊತೆಗೆ ಲೈಂಗಿಕ ಆಸಕ್ತಿ ಹೆಚ್ಚಿಸುವ ಕೆಲಸವನ್ನು ಜಿನ್ಸೆಂಗ್ ಮಾಡುತ್ತದೆ. ಕೊರಿಯಾ, ಉತ್ತರ ಚೀನಾ, ಇಂಡೋನೇಷ್ಯಾಗಳಲ್ಲಿ ಇದು ಹೆಚ್ಚಾಗಿ ಸಿಗುತ್ತದೆ. ಜಿನ್ಸೆಂಗ್ ನಿಂದ ತಯಾರಿಸುವ ಕಾಫಿ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಟೀ, ಔಷಧಿ ಹಾಗೂ ಮಾತ್ರೆ ರೂಪದಲ್ಲಿಯೂ ಇದು ಲಭ್ಯವಿದೆ.
ಸಾಮಾನ್ಯವಾಗಿ ವರ್ಷ 40 ಆಗ್ತಿದ್ದಂತೆ ಪುರುಷರು ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಳೆದುಕೊಳ್ತಾರೆ. ಅಂಥವರಿಗೆ ಇದು ಒಳ್ಳೆ ಮದ್ದು. ಇದ್ರ ಸೇವನೆಯಿಂದ ಸೆಕ್ಸ್ ಹಾರ್ಮೋನ್ ಉತ್ಪತ್ತಿ ಹೆಚ್ಚಾಗುತ್ತದೆ. ಜೀರ್ಣಕ್ರಿಯೆಯಲ್ಲಿ ಸಮಸ್ಯೆಯಿರುವ ಪುರುಷರು ಅಗತ್ಯವಾಗಿ ಇದನ್ನು ಸೇವನೆ ಮಾಡಬೇಕು.