ಮೊಡವೆ ಮಹಿಳೆಯರಿಗೆ ಮಾತ್ರ ಸೀಮಿತವಲ್ಲ. ಪುರುಷರನ್ನೂ ಇದು ಬಿಡದೆ ಕಾಡುತ್ತದೆ. ಹಾಗಿದ್ದರೆ ಪುರುಷರು ಇದರ ನಿಯಂತ್ರಣಕ್ಕೆ ಏನು ಮಾಡಬಹುದು.
ಪುರುಷರಿಗೆ ಮೊಡವೆ ಕಾಣಿಸಿಕೊಳ್ಳಲು ಪ್ರಮುಖ ಕಾರಣ ಎಂದರೆ ತ್ವಚೆಯ ಎಣ್ಣೆಯ ಅಂಶ. ಅದಕ್ಕಾಗಿ ನಿತ್ಯ ಹತ್ತು ಅಥವಾ ಅದಕ್ಕಿಂತ ಹೆಚ್ಚು ಲೋಟ ನೀರು ಕುಡಿಯಿರಿ. ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತಿದ್ದಂತೆ ಸಮಸ್ಯೆಗಳು ಹೆಚ್ಚುತ್ತವೆ. ಹೆಚ್ಚು ನೀರು ಕುಡಿದು ದೇಹದ ಕಲ್ಮಶಗಳು ದೂರವಾದರೆ ಮೊಡವೆಯಂತ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ.
ದಿನಕ್ಕೆ ನಾಲ್ಕರಿಂದ ಐದು ಬಾರಿ ಮುಖ ತೊಳೆಯಿರಿ. ಕಚೇರಿಯಲ್ಲಿದ್ದರೆ ವಾಶ್ ರೂಮ್ ಗೆ ಹೋಗಿ ಬರುವಾಗೆಲ್ಲಾ ಮುಖ ತೊಳೆಯಿರಿ. ಫೇಸ್ ವಾಶ್ ಬಳಸಿ.
ಅಲೋವೇರಾ ಜೆಲ್ ನಿಂದ ಫೇಸ್ ಪ್ಯಾಕ್ ಮಾಡಿಕೊಳ್ಳಿ. ವಾರಕ್ಕೊಮ್ಮೆ ಹೀಗೆ ಮಾಡುವುದರಿಂದ ಇದರಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಗುಣ ತ್ವಚೆಯ ಉರಿಯೂತವನ್ನು ಕಡಿಮೆ ಮಾಡಿ ಮೊಡವೆಗಳು ಬರದಂತೆ ನೋಡಿಕೊಳ್ಳುತ್ತದೆ.
ಜೇನುತುಪ್ಪದಿಂದ ಮುಖಕ್ಕೆ ಪ್ಯಾಕ್ ಮಾಡಿಕೊಳ್ಳಿ. ಇದು ಮೊಡವೆ, ಗುಳ್ಳೆ, ಕಲೆಗಳನ್ನು ದೂರ ಮಾಡಿ ಆಕರ್ಷಕ ತ್ವಚೆಯನ್ನು ನಿಮ್ಮದಾಗುವಂತೆ ಮಾಡುತ್ತದೆ.