ಬಂಜೆತನ ಸಮಸ್ಯೆ ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಗಂಡಸರಿಗೂ ಈ ಸಮಸ್ಯೆ ಕಾಡುತ್ತದೆ. ಪುರಷರಲ್ಲಿ ಕಂಡುಬರುವ ಈ ಬಂಜೆತನ ಸಮಸ್ಯೆಗೆ ನಿದ್ರೆ, ಒತ್ತಡವೂ ಕೂಡ ಒಂದು ಕಾರಣವೆನ್ನಬಹುದು.
ಇದನ್ನು ಹೇಗೆ ನಿವಾರಿಸಿಕೊಳ್ಳಬೇಕು ಎಂಬ ಚಿಂತೆಯಲ್ಲಿ ಇರುವವರು ಇದನ್ನೊಮ್ಮೆ ಓದಿ.
ನಿದ್ರೆ: ನಿದ್ರೆ ಹೆಚ್ಚಾದರೂ ಸಮಸ್ಯೆ, ಕಡಿಮೆಯಾದರೂ ಸಮಸ್ಯೆ. ಸರಿಯಾಗಿ ನಿದ್ದೆ ಮಾಡುವುದರಿಂದ ಪುರುಷರು ಬಂಜೆತನ ಸಮಸ್ಯೆಯಿಂದ ಪಾರಾಗಬಹುದಂತೆ. ರಾತ್ರಿ ಬೇಗ ಮಲಗುವುದರಿಂದ ವಿರ್ಯಾಣು ಉತ್ಪಾದನೆ ಚೆನ್ನಾಗಿರುತ್ತದೆಯಂತೆ. ಈ ವಿರ್ಯಾಣುಗಳು ಅಂಡಾಣುವನ್ನು ಫಲವತ್ತತೆಯನ್ನು ಹೆಚ್ಚು ಗೊಳಿಸುವ ಶಕ್ತಿಯನ್ನು ಹೊಂದಿರುತ್ತದೆ. ಹಾಗಾಗಿ ಸರಿಯಾಗಿ ನಿದ್ದೆ ಮಾಡುವುದರಿಂದ ಬಂಜೆತನ ನಿವಾರಿಸಿಕೊಳ್ಳಬಹುದು.
ವ್ಯಾಯಾಮ: ವ್ಯಾಯಾಮ ಮಾಡುವುದರಿಂದ ಬಂಜೆತನ ಸಮಸ್ಯೆ ಕಡಿಮೆ ಮಾಡಿಕೊಳ್ಳಬಹುದಂತೆ. ಪುರುಷರಲ್ಲಿ ಬೊಜ್ಜಿನ ಸಮಸ್ಯೆ ಕೂಡ ಈ ಬಂಜೆತನಕ್ಕೆ ಒಂದು ಕಾರಣ. ವೇಗವಾದ ನಡಿಗೆ ಹಾಗೂ ವ್ಯಾಯಾಮದಿಂದ ದೇಹ ಸದೃಢವಾಗುವುದರ ಜತೆಗೆ ವೀರ್ಯಾಣುವಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆಯಂತೆ.
ಹಾಗೇ ಧೂಮಪಾನ, ಮಧ್ಯಪಾನ ಮಾಡುವುದರಿಂದ ಬಂಜೆತನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ವಿಟಮಿನ್ ಡಿ, ವಿಟಮಿನ್ ಸಿ ಇರುವ ಪದಾರ್ಥಗಳನ್ನು ಹೆಚ್ಚು ಸೇವಿಸಿ. ಒತ್ತಡ ನಿವಾರಿಸಿಕೊಳ್ಳುವುದಕ್ಕೆ ಧ್ಯಾನವನ್ನು ಮಾಡಿ. ಇದು ಬಂಜೆತನ ಸಮಸ್ಯೆಯನ್ನು ನಿವಾರಿಸುವುದಕ್ಕೆ ಸಹಕಾರಿಯಾಗಿದೆ.