ನಾವು ಎಷ್ಟೇ ಪ್ರಯತ್ನಪಡಲಿ ವೇಗವಾಗಿ ಓಡುವ ಈ ಜಗತ್ತಿನಲ್ಲಿ ಹೊರಗಿನ ಆಹಾರ ತಿನ್ನುವ ಅನಿವಾರ್ಯತೆ ಎದುರಾಗುತ್ತದೆ. ಹೊರಗಿನ ಆಹಾರ ತಿನ್ನಬಾರದು. ಅದ್ರಲ್ಲೂ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿರುವ ಆಹಾರವನ್ನು ಪುರುಷರು ಸೇವಿಸಲೇಬಾರದು. ಇದ್ರಿಂದ ಅಪಾಯಕಾರಿ ರೋಗಗಳು ಪುರುಷರನ್ನು ಕಾಡುತ್ತವೆ.
ಪ್ಲಾಸ್ಟಿಕ್ ನಲ್ಲಿರುವ ರಾಸಾಯನಿಕ ಅಂಶ ಪುರುಷರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪ್ಲಾಸ್ಟಿಕ್ ಬ್ಯಾಗ್, ಪ್ಲಾಸ್ಟಿಕ್ ಪ್ಲೇಟ್ ಹಾಗೂ ಪ್ಲಾಸ್ಟಿಕ್ ಬಾಟಲಿಯಲ್ಲಿರುವ ಆಹಾರದಿಂದ ಪುರುಷರು ದೂರವಿರಬೇಕು. ದಕ್ಷಿಣ ಆಸ್ಟ್ರೇಲಿಯಾದ ಮೆಡಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ 1500 ಪುರುಷರನ್ನು ಪರೀಕ್ಷೆಗೊಳಪಡಿಸಿತ್ತು. ಈ ವೇಳೆ ಪತ್ತೆಯಾದ Phthalate ಹೆಸರಿನ ರಾಸಾಯನಿಕ ಹೃದಯ ಸಂಬಂಧಿ ಖಾಯಿಲೆ, ರಕ್ತದೊತ್ತಡ, ಟೈಪ್-2 ಡಯಾಬಿಟಿಸ್ ಗೆ ಕಾರಣವಾಗುತ್ತದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.
35 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಪುರುಷರ ಮೂತ್ರದ ಮಾದರಿಯಲ್ಲಿ Phthalate ಅಂಶ ಪತ್ತೆಯಾಗಿದೆ. ಈ ರಾಸಾಯನಿಕ ಹೆಚ್ಚಿರುವ ಪುರುಷರು ಹೃದಯ ಖಾಯಿಲೆ, ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು ಎಂದು ಸಂಶೋಧನೆ ವರದಿಯಲ್ಲಿ ಹೇಳಲಾಗಿದೆ.
ಪಾಶ್ಚಿಮಾತ್ಯ ರಾಷ್ಟ್ರಗಳ ಪುರುಷರಲ್ಲಿ Phthalate ಮಟ್ಟ ಜಾಸ್ತಿಯಿದೆ. ಯಾಕೆಂದ್ರೆ ಅಲ್ಲಿನ ಪುರುಷರು ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡ್ತಾರೆ.