ನಿತ್ಯ ಶೇವಿಂಗ್ ಮಾಡುವವರಿಗೆ ತಮ್ಮ ತ್ವಚೆಯನ್ನು ಕಾಪಾಡಿಕೊಳ್ಳುವುದು ಬಹಳ ಸವಾಲಿನ ಕೆಲಸವೂ ಹೌದು. ಹಲವು ವಿಧದ ಶೇವಿಂಗ್ ಉತ್ಪನ್ನಗಳು ಮಾರುಕಟ್ಟೆಯಲ್ಲಿದ್ದರೂ ಬಹುತೇಕ ರಾಸಾಯನಿಕ ಮಿಶ್ರಿತವೇ ಆಗಿರುತ್ತದೆ.
ಶೇವಿಂಗ್ ಗೂ ಮುನ್ನ ನಿಮ್ಮ ತ್ವಚೆಯನ್ನು ಸಿದ್ಧಪಡಿಸುವುದು ಹೇಗೆ ಗೊತ್ತೇ. ಮೊದಲು ಸ್ಕ್ರಬ್, ವಾಶ್ ಮೂಲಕ ನಿಮ್ಮ ತ್ವಚೆಯನ್ನು ತಯಾರು ಮಾಡಿಡಿ. ಶೇವ್ ಜೆಲ್ ಹಾಕಿಕೊಳ್ಳುವುದು ಒಳ್ಳೆಯದು. ಇದರಿಂದ ಚರ್ಮಕ್ಕೆ ಗಾಯಗಳಾಗುವುದನ್ನು ತಡೆಯಬಹುದು.
ಮಾರುಕಟ್ಟೆಯಲ್ಲಿ ಆಧುನಿಕವಾಗಿ ಸಿಗುವ ಬ್ಲೇಡ್ ಬಳಸಿಕೊಳ್ಳಿ. ಇದು ನಿಮ್ಮ ಮುಖಕ್ಕೆ ಹೊಂದಿಕೊಳ್ಳುತ್ತದೆಯೇ ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಿ. ಶೇವಿಂಗ್ ತಂತ್ರವನ್ನು ಉಪಯೋಗಿಸಿ. ಕೂದಲು ಬೆಳೆಯುವ ರೀತಿಯಲ್ಲೇ ಶೇವ್ ಮಾಡಿ. ಕೊನೆಗೆ ತುಟಿಯ ಸಮೀಪದ ಕೂದಲು ತೆಗೆಯಿರಿ. ಇದು ಸೂಕ್ಷ್ಮ ಪ್ರದೇಶವಾದ್ದರಿಂದ ಸಾಧ್ಯವಾದಷ್ಟು ಎಚ್ಚರಿಕೆ ವಹಿಸಿ.
ಮೊದಲೇ ಜೆಲ್ ಬಳಸುವುದರಿಂದ ಈ ಭಾಗ ಮೃದುವಾಗಿರುತ್ತದೆ. ಸೂಕ್ಷ್ಮ ಚರ್ಮದವರು ಸೋಂಕು ಮತ್ತು ಅಲರ್ಜಿಗೆ ತುತ್ತಾಗುವುದನ್ನು ತಪ್ಪಿಸಲು ರೇಜರ್ ಅನ್ನು ಯಾರೊಂದಿಗೂ ಹಂಚಿಕೊಳ್ಳದಿರಿ. ಬ್ಲೇಡ್ ಒಳಗೆ ಕೊಳೆ ನಿಲ್ಲದಂತೆ ನೋಡಿಕೊಳ್ಳಿ ಮತ್ತು ಹಿತಕರವಾಗಿ ಶೇವ್ ಮಾಡಿ.