ಪ್ರಪಂಚದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ ಎಂಬ ವರದಿಯನ್ನು ನಾವು ನೋಡಿದ್ದೇವೆ. ಆದರೆ ಯುವತಿಯರಿಗೆ ಮದುವೆ ಗಂಡು ಕೂಡ ಸಿಗುತ್ತಿಲ್ಲ. ಅಂತಹ ಸ್ಥಿತಿ ಬ್ರೆಜಿಲ್‌ನ ಗ್ರಾಮವೊಂದರಲ್ಲಿ ನಿರ್ಮಾಣವಾಗಿದೆ. ಈ ಗ್ರಾಮದಲ್ಲಿ ಸುಂದರ ಮಹಿಳೆಯರಿದ್ದಾರೆ. ಮದುವೆಗೆ ವರನನ್ನು ಹುಡುಕುತ್ತಿದ್ದಾರೆ. ಆದರೆ ಮದುವೆಯಾಗಬೇಕೆಂಬ ಅವರ ಆಸೆ ಈಡೇರುತ್ತಲೇ ಇಲ್ಲ. ಬ್ರೆಜಿಲ್‌ನ ನೋಯ್ವಾ ಎಂಬ ಹಳ್ಳಿ ಬೆಟ್ಟಗಳ ಮೇಲಿದೆ. ಇಲ್ಲಿ ಸಾಕಷ್ಟು ಸುಂದರ ಮಹಿಳೆಯರು ಇದ್ದಾರೆ ಮತ್ತು ಅವರು ಒಂಟಿ ಪುರುಷರನ್ನು ಹುಡುಕುತ್ತಿದ್ದಾರೆ.
ಈ ಗ್ರಾಮದಲ್ಲಿ ಸುಮಾರು 600 ಮಹಿಳೆಯರು ವಾಸಿಸುತ್ತಿದ್ದಾರೆ. ತಮ್ಮನ್ನು ಮದುವೆಯಾಗಲು ಇಚ್ಛಿಸುವವರಿಗೆ ಹಣ ಕೊಡಲೂ ಇವರು ಸಿದ್ಧ. ಇಷ್ಟೆಲ್ಲಾ ಆದರೂ ಯಾರೂ ಇವರನ್ನು ಮದುವೆಯಾಗಬಲು ಮುಂದೆ ಬರುತ್ತಿಲ್ಲ. ಈ ಮಹಿಳೆಯರು ವಾಸಿಸುವ ಸ್ಥಳದ ಲಿಂಗ ಅನುಪಾತವು ಉತ್ತಮವಾಗಿಲ್ಲ. ಇಲ್ಲಿ ಹುಡುಗರ ಸಂಖ್ಯೆ ಹುಡುಗಿಯರಿಗಿಂತ ಬಹಳ ಕಡಿಮೆ. ಯುವತಿಯರಿಗೆ ತಮ್ಮಿಷ್ಟದಂತಹ ವರ ಸಿಗದಿರಲು ಇದೇ ಕಾರಣ. ಈ ಊರಿನಲ್ಲಿ ಗಂಡಸರಿದ್ದರೂ ಹಳ್ಳಿಯಲ್ಲಿ ವಾಸಿಸಲು ಇಷ್ಟಪಡುವುದಿಲ್ಲ. ನಗರಕ್ಕೆ ವಲಸೆ ಹೋಗಿ ಬಿಡುತ್ತಾರೆ. ಇದರಿಂದ ಗ್ರಾಮದಲ್ಲಿ ಮಹಿಳೆಯರು ಒಂಟಿಯಾಗಿರುತ್ತಾರೆ.
ಬ್ರೆಜಿಲ್‌ನ ಈ ಹಳ್ಳಿಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿರುವುದರಿಂದ ಪುರುಷರು ಇಲ್ಲಿ ವಾಸಿಸಲು ಇಷ್ಟಪಡುತ್ತಿಲ್ಲ. ಗ್ರಾಮದ ಜನರ ಮುಖ್ಯ ಕಸುಬು ಕೃಷಿ ಮತ್ತು ಪಶುಪಾಲನೆ. ಈ ಎಲ್ಲಾ ಕೆಲಸಗಳನ್ನು ಮಹಿಳೆಯರು ಮಾತ್ರ ಮಾಡುತ್ತಾರೆ. ಅದಕ್ಕೇ ಈ ಹಳ್ಳಿಯ ಗಂಡಸರು ಕೆಲಸ ಹುಡುಕಿಕೊಂಡು ನಗರಕ್ಕೆ ಹೋಗುತ್ತಾರೆ. ವರದಿಯ ಪ್ರಕಾರ ಗ್ರಾಮದಲ್ಲಿ ಕೆಲವೊಂದು ಕಠಿಣ ನಿಯಮಗಳಿದ್ದು, ಅವುಗಳಿಂದಾಗಿ ಪುರುಷರು ಇಲ್ಲಿಗೆ ಬರಲು ಇಚ್ಛಿಸುತ್ತಿಲ್ಲವಂತೆ. ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿರುವ ನಿಯಮಗಳು ಮತ್ತು ನಿಬಂಧನೆಗಳನ್ನು ಇಲ್ಲಿನ ಮಹಿಳೆಯರು ಅನುಸರಿಸುತ್ತಾರೆ. ಆದರೆ ಪುರುಷರು ಇದನ್ನು ಇಷ್ಟಪಡುವುದಿಲ್ಲ.