ಮಹಿಳೆಯರಂತೆ ಪುರುಷರಿಗೂ ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ಸಮಸ್ಯೆ ಕಾಡುತ್ತದೆ. ಇವು ತ್ವಚೆಯನ್ನು ಮತ್ತಷ್ಟು ಗಡುಸಾಗಿಸುತ್ತದೆ. ಇದರ ನಿವಾರಣೆಗೆ ಫೇಸ್ ಸ್ಕ್ರಬ್ ಸಹಕಾರಿ.
ಪುರುಷರು ಸಾಮಾನ್ಯವಾಗಿ ಬಳಸುವ ಫೇಸ್ ವಾಶ್ ಗಳು ತ್ವಚೆಯ ಮೇಲ್ಭಾಗವನ್ನು ಸ್ವಚ್ಛಗೊಳಿಸಿದರೂ ಆಳಕ್ಕೆ ಇಳಿದು ಕೆಲಸ ಮಾಡುವುದಿಲ್ಲ. ಫೇಸ್ ಸ್ಕ್ರಬ್ ಗಳು ಚರ್ಮದ ರಂಧ್ರದಲ್ಲಿರುವ ಕೊಳೆ ಮತ್ತು ಸತ್ತ ಜೀವಕೋಶಗಳನ್ನು ದೂರ ಮಾಡುತ್ತವೆ. ಮತ್ತು ತ್ವಚೆಗೆ ವಿಶೇಷ ಹೊಳಪು ನೀಡುತ್ತವೆ.
ನಿತ್ಯ ಶೇವಿಂಗ್ ಮಾಡುವ ಪುರುಷರು ಗಾಯ ಹಾಗೂ ಕ್ರೀಮ್ ಗಳ ಅಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಸ್ಕ್ರಬ್ ಗಳು ಇದನ್ನೂ ನಿವಾರಿಸುತ್ತವೆ. ಕೆಲವೊಮ್ಮೆ ಮೂಡುವ ಮೊಡವೆಗಳು ಕಲೆ ರೂಪದಲ್ಲಿ ಉಳಿದು ಬಿಡುತ್ತವೆ. ಇದರ ನಿವಾರಣೆಗೂ ಸ್ಕ್ರಬ್ ಸಹಕಾರಿ.
ನಿಯಮಿತವಾಗಿ ಅಂದರೆ ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಫೇಸ್ ಸ್ಕ್ರಬ್ ಮಾಡುವುದರಿಂದ ಕಣ್ಣುಗಳ ಕೆಳಭಾಗದಲ್ಲಿ, ಕೆನ್ನೆಯಲ್ಲಿ ಕಾಣಿಸುವ ಸುಕ್ಕಿನ ಲಕ್ಷಣಗಳು ದೂರವಾಗುತ್ತವೆ. ತ್ವಚೆಯ ಆರೋಗ್ಯವನ್ನೂ ಕಾಪಾಡಿ, ತ್ವಚೆಯನ್ನು ಮೃದುಗೊಳಿಸುವ ಫೇಸ್ ಸ್ಕ್ರಬ್ ಅನ್ನು ಬಳಸುವುದರಿಂದ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.