ಆರೋಗ್ಯ ಚೆನ್ನಾಗಿರಬೇಕಂದ್ರೆ ಚೆನ್ನಾಗಿ ನಿದ್ದೆ ಮಾಡಲೇಬೇಕು. ಆದ್ರೆ ಪುರುಷರು ರಾತ್ರಿ ಬಟ್ಟೆ ಇಲ್ಲದೆ ಮಲಗಿದರೆ ಅದರಿಂದ ದೇಹಕ್ಕೆ ಹಲವಾರು ಲಾಭಗಳು ಸಿಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ದೇಹದ ಉಷ್ಣತೆಯು ನಿಮ್ಮ ನಿದ್ರೆಯ ಗುಣಮಟ್ಟದಲ್ಲಿ ಅನೇಕ ಬದಲಾವಣೆಗಳನ್ನು ತರುತ್ತದೆ. ರಾತ್ರಿ ಬಟ್ಟೆ ಧರಿಸಿ ಮಲಗಿದರೆ ದೇಹ ಬಿಸಿಯಾಗತೊಡಗುತ್ತದೆ. ಈ ಕಾರಣದಿಂದಾಗಿ, ನಿದ್ರೆ ಹಾಳಾಗುತ್ತದೆ. ನಿದ್ರೆಯ ಕೊರತೆಯಿಂದ, ದಿನವಿಡೀ ದೇಹದಲ್ಲಿ ಆಯಾಸ ಇರುತ್ತದೆ, ಆದರೆ ಬಟ್ಟೆ ಇಲ್ಲದೆ ಮಲಗಿದಾಗ, ದೇಹವು ತಣ್ಣಗಿದ್ದು ಚೆನ್ನಾಗಿ ನಿದ್ರೆ ಬರುತ್ತದೆ.
ಬಟ್ಟೆ ಇಲ್ಲದೆ ಮಲಗುವುದರಿಂದ ಇನ್ನೂ ಹಲವು ರೀತಿಯ ಅನುಕೂಲಗಳಿವೆ. ಆರೋಗ್ಯ ತಜ್ಞರ ಪ್ರಕಾರ ವಯಸ್ಕರಿಗೆ ಪ್ರತಿದಿನ ಕನಿಷ್ಠ ಏಳು ಗಂಟೆಗಳ ನಿದ್ದೆ ಅಗತ್ಯ. ಇದಕ್ಕಿಂತ ಕಡಿಮೆ ನಿದ್ದೆ ಮಾಡಿದರೆ ಒಂದಿಲ್ಲೊಂದು ಕಾಯಿಲೆಗಳು ಬರಬಹುದು. ಬಟ್ಟೆ ಧರಿಸದೇ ಕಡಿಮೆ ತಾಪಮಾನದಲ್ಲಿ ಮಲಗುವುದರಿಂದ, ದೇಹದಿಂದ ಕಂದು ಕೊಬ್ಬು ಬಿಡುಗಡೆಯಾಗುತ್ತದೆ. ಇದು ರಕ್ತದಲ್ಲಿನ ಹೆಚ್ಚುವರಿ ಸಕ್ಕರೆಯನ್ನು ತೆಗೆದುಹಾಕುವ ಮೂಲಕ ಚಯಾಪಚಯ ದರವನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುತ್ತದೆ.
ಆರೋಗ್ಯ ತಜ್ಞರ ಪ್ರಕಾರ ಬಟ್ಟೆ ಇಲ್ಲದೆ ಮಲಗುವುದು ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಇದರಿಂದ ಪುರುಷರ ವೀರ್ಯದ ಸಂಖ್ಯೆ ಹೆಚ್ಚಾಗುತ್ತದೆ. ಇದು ವೀರ್ಯವನ್ನು ಹೆಚ್ಚು ಸಾಂದ್ರಗೊಳಿಸುತ್ತದೆ. ಬಿಗಿಯಾದ ಬಟ್ಟೆಗಳನ್ನು ಧರಿಸಿ ಮಲಗಿದರೆ ವೀರ್ಯದ ಪ್ರಮಾಣ ಕಡಿಮೆಯಾಗಬಹುದು. ಬಟ್ಟೆ ಕಳಚಿ ಮಲಗುವುದರಿಂದ ಇಡೀ ದೇಹಕ್ಕೆ ಸಾಕಷ್ಟು ಆಮ್ಲಜನಕ ಸಿಗುತ್ತದೆ. ಇದು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಈ ಸಮಯದಲ್ಲಿ ಉಸಿರಾಡಲು ಸುಲಭವಾಗುತ್ತದೆ. ನೀವು ಸರಿಯಾಗಿ ನಿದ್ದೆ ಮಾಡಿದರೆ, ಮೆದುಳಿನ ವಿಷಗಳು ತಾವಾಗಿಯೇ ಹೊರಹೋಗಲಾರಂಭಿಸುತ್ತವೆ.