ಪುರುಷರ ಬಟ್ಟೆಯನ್ನು ಧರಿಸಿ ಕಳ್ಳತನಕ್ಕೆ ಯತ್ನಿಸಿದ್ದ 24 ವರ್ಷದ ಯುವತಿಯನ್ನು ಮುಂಬೈನ ಸಹರ್ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಈ ಯುವತಿಯು ಕಾರು ಕದಿಯಲು ಯತ್ನಿಸುತ್ತಿದ್ದ ವೇಳೆಯಲ್ಲಿ ಇದನ್ನು ತಡೆಯಲು ಯತ್ನಿಸಿದ ದೂರುದಾರ ಹಾಗೂ ಕಾರಿನ ಚಾಲಕನ ಬಾಯಿಗೆ ಬ್ಲೇಡ್ ಇಟ್ಟು ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಫೆಬ್ರವರಿ 23ರ ಮುಂಜಾನೆ 5:30ರ ಸುಮಾರಿಗೆ ಅಂಧೇರಿ – ಕುರ್ಲಾ ರಸ್ತೆಯ ಮೀರಜ್ ಹೋಟೆಲ್ ಬಳಿಯಲ್ಲಿ ಈ ಘಟನೆ ಸಂಭವಿಸಿದೆ.
ಆರೋಪಿ ಪೂಜಾ ಲೋಂಡೆ ಚಾಕಲ ನಿವಾಸಿ. ಲೋಂಡೆ ತನ್ನ ಚೇಲಾಗಳ ಜೊತೆಯಲ್ಲಿ ಪಾರ್ಕ್ ಮಾಡಿದ್ದ ಕಾರುಗಳನ್ನು ಕದಿಯಲು ಯತ್ನಿಸುತ್ತಿದ್ದ ವೇಳೆಯಲ್ಲಿ ಜಾಗೃತರಾದ ಕಾರು ಚಾಲಕ ಯುವತಿಯ ವಿರುದ್ಧ ದೂರು ನೀಡಿದ್ದು ದೂರನ್ನು ಆಧರಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕಾರು ಚಾಲಕ ನೀಡಿದ ವಿವರಣೆಗಳನ್ನು ಆಧರಿಸಿ ನಾವು ಯುವತಿಯನ್ನು ಬಂಧಿಸಿದ್ದೇವೆ. ತನಿಖೆಯ ವೇಳೆಯಲ್ಲಿ ಈಕೆಯ ವಿರುದ್ಧ 2018ರಲ್ಲಿ ವಿಲೆ ಪಾರ್ಲೆ ಹಾಗೂ ಸಾಂತಾಕ್ರೂಸ್ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಮತ್ತು ದರೋಡೆ ಪ್ರಕರಣಗಳು ದಾಖಲಾಗಿದ್ದವು ಎಂಬುದು ತಿಳಿದುಬಂದಿದೆ ಎಂದು ಸಹರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ .