alex Certify ಪುರಾವೆ ಇಲ್ಲದೆ ಪತಿಯನ್ನು ಹೆಣ್ಣುಬಾಕ – ಕುಡುಕ ಎನ್ನುವುದು ಕ್ರೂರತ್ವ; ಹೈಕೋರ್ಟ್ ಮಹತ್ವದ ಅಭಿಪ್ರಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುರಾವೆ ಇಲ್ಲದೆ ಪತಿಯನ್ನು ಹೆಣ್ಣುಬಾಕ – ಕುಡುಕ ಎನ್ನುವುದು ಕ್ರೂರತ್ವ; ಹೈಕೋರ್ಟ್ ಮಹತ್ವದ ಅಭಿಪ್ರಾಯ

ಪುರಾವೆ ಇಲ್ಲದೆ ಪತಿಯನ್ನು ಹೆಣ್ಣುಬಾಕ ಅಥವಾ ಕುಡುಕ ಎನ್ನುವುದು ಸರಿಯಲ್ಲ. ಇದು ಕ್ರೂರತ್ವವಾಗುತ್ತದೆ ಎಂದು ಮಹತ್ವದ ಆದೇಶ ನೀಡಿರುವ ಬಾಂಬೆ ಹೈಕೋರ್ಟ್, ಅಲ್ಲದೆ ಪತಿಯನ್ನು ಈ ಮೂಲಕ ಸಮಾಜದ ಮುಂದೆ ತಲೆತಗ್ಗಿಸುವಂತೆ ಮಾಡುವುದು ಸರಿಯಾದ ನಡೆಯಲ್ಲ ಎಂದು ಹೇಳಿದೆ.

ಪುಣೆ ಮೂಲದ ಮಹಿಳೆಯೊಬ್ಬರು ಪ್ರಕರಣವೊಂದರ ಸಂಬಂಧ ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ವೇಳೆ ತಮ್ಮ ಪತಿ ವಿರುದ್ಧ ಈ ಆರೋಪ ಮಾಡಿದ್ದರು. ಪುಣೆಯ ಕೌಟುಂಬಿಕ ನ್ಯಾಯಾಲಯ ಮಹಿಳೆ ಸಲ್ಲಿಸಿದ್ದ ಪ್ರಕರಣದ ಅರ್ಜಿಯನ್ನು ವಜಾಗೊಳಿಸಿದ್ದು ಇದರ ಮಧ್ಯೆ ಆಕೆಯ ಪತಿ ನಿಧನ ಹೊಂದಿದ್ದರು.

ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ 50 ವರ್ಷದ ಈ ಮಹಿಳೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದು, ಪತಿಯ ಪರವಾಗಿ ಆತನ ಕುಟುಂಬಸ್ಥರು ಹಾಜರಾಗಿದ್ದರು. ತಮ್ಮ ಪತಿ ವಿರುದ್ಧ ಮಾಡಿದ್ದ ಆರೋಪಗಳ ಕುರಿತಂತೆ ಆಕೆ ಯಾವುದೇ ಪುರಾವೆಗಳನ್ನು ನೀಡಿರಲಿಲ್ಲ ಎಂಬುದು ನ್ಯಾಯಾಲಯದ ಗಮನಕ್ಕೆ ಬಂದಿದ್ದು, ಆಕೆಯ ಅರ್ಜಿಯನ್ನು ವಜಾಗೊಳಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...