ಶ್ರೀ ಕ್ಷೇತ್ರ ಕೊಲ್ಲೂರಿನ ಮೂಕಾಂಬಿಕಾ ದೇಗುಲಕ್ಕೆ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಇಂದು ಭೇಟಿ ನೀಡಿದ್ದಾರೆ. ದೇವಸ್ಥಾನಕ್ಕೆ ಆಗಮಿಸಿದ ತಾವರ್ ಚಂದ್ ಗೆಹ್ಲೋಟ್ರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಗೆಹ್ಲೋಟ್, ಮೂಕಾಂಬಿಕೆಗೆ ತುಪ್ಪದ ಆರತಿ ಬೆಳಗಿದರು.
ಬ್ರಹ್ಮಾರ್ಪಣ ನೆರವೇರಿಸಿ ಅರ್ಚನೆ ಮಾಡಿಸಿದ ಬಳಿಕ ದೇವಾಲಯದ ಆವರಣದಲ್ಲೇ ಇರುವ ವೀರಭದ್ರಸ್ವಾಮಿ ದೇವರಿಗೂ ಗೆಹ್ಲೋಟ್ ಪೂಜೆ ಸಲ್ಲಿಸಿದರು. ಬಳಿಕ ದೇಗುಲ ಪ್ರದಕ್ಷಿಣೆ ಹಾಕಿದ ರಾಜ್ಯಪಾಲರು ಚಿನ್ನದ ರಥವನ್ನು ವೀಕ್ಷಣೆ ಮಾಡಿದರು.
ರಾಜ್ಯಪಾಲ ತಾರಾಚಂದ್ ಗೆಹ್ಲೋಟ್ರಿಗೆ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸೇರಿದಂತೆ ಅನೇಕರು ಸಾಥ್ ನೀಡಿದರು.