ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗಕ್ಕೆ ಆಘಾತ ತಂದಿದ್ದು, ಪರಭಾಷಾ ಚಿತ್ರಗಳ ನಟ-ನಟಿಯರು, ನಿರ್ಮಾಪಕ-ನಿರ್ದೇಶಕರು ಕಂಬನಿ ಮಿಡಿದಿದ್ದಾರೆ.
ಹೃದಯಾಘಾತದಿಂದ ಸಾವನ್ನಪ್ಪಿರುವ ಪುನೀತ್ ರಾಜ್ ಕುಮಾರ್ ಅಗಲಿಕೆ ಕುರಿತಾಗಿ ಆತಂಕದಲ್ಲಿ ಸರಣಿ ಟ್ವೀಟ್ ಮಾಡಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಫಿಟ್ನೆಸ್ ಕಾಪಾಡಿಕೊಂಡವರಿಗೆ ಇಂಥಹ ಸಾವು ಸಂಭವಿಸಲ್ಲ ಎಂದು ಹಲವರು ಹೇಳುವುದಿದೆ. ಆದರೆ ಪುನೀತ್ ನಿಧನದ ಬಳಿಕ ಆ ಮಾತನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ʼದೀಪಾವಳಿʼಗೆ ಮನೆಯ ಡ್ರಾಯಿಂಗ್ ರೂಮ್ ಹೀಗೆ ಶೃಂಗರಿಸಿ
ವರ್ಕೌಟ್ ಜೊತೆಗೆ ಆರೋಗ್ಯಕರ ಅಭ್ಯಾಸ ಇಟ್ಟುಕೊಳ್ಳುವುದು ಹಾಗೂ ಏಕಾಏಕಿ ಸಾವು ಸಂಭವಿಸುವುದಕ್ಕು ಯಾವುದೇ ಸಂಬಂಧವಿಲ್ಲ ಎಂಬ ಕಟು ಸತ್ಯ ಪುನೀತ್ ನಿಧನದಿಂದ ಬಯಲಾಗಿದೆ. ತಾನು ಯಾರನ್ನು ಕೊಲ್ಲುತ್ತಿದ್ದೇನೆ ಎಂದು ವಿಧಿ ಯಾಕೆ ಕಾಳಜಿ ಮಾಡಲ್ಲ? ಈ ಬಗ್ಗೆ ದೇವರೇ ಉತ್ತರ ನೀಡಬೇಕು ಎಂದು ಬರೆದುಕೊಂಡಿದ್ದಾರೆ.
ಪುನೀತ್ ರಾಜ್ ಕುಮಾರ್ ಸಾವು ಕೆಟ್ಟ ಕನಸಿನಂತೆ ಅನಿಸುತ್ತಿದೆ. ಇನ್ನು ಅವರ ಆಪ್ತರ ಪರಿಸ್ಥಿತಿ ಏನಾಗಿರಬಹುದು ಎಂದು ಊಹಿಸಲೂ ಸಾಧ್ಯವಿಲ್ಲ. ಸಾವಿಗೆ ತಾರತಮ್ಯವೆಂಬುದಿಲ್ಲ, ಅದು ಯಾರನ್ನು ಯಾವಾಗ ಬೇಕಾದರೂ ಕೊಲ್ಲುತ್ತದೆ ಎಂಬುದು ಭಯಂಕರ ಸತ್ಯ…. ಬದುಕಿರುವಾಗಲೇ ಫಾಸ್ಟ್ ಫಾರ್ವರ್ಡ್ ಮೋಡ್ ನಲ್ಲಿ ಜೀವಿಸಬೇಕಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.