ಪುದೀನಾ ಸೊಪ್ಪಿನ ಪ್ರಯೋಜನಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಬೇಸಿಗೆಯಲ್ಲಿ ನೀರಿಗೆ ನಾಲ್ಕಾರು ಪುದೀನಾ ಎಲೆಗಳನ್ನು ಹಾಕಿ ಮುಚ್ಚಿಡಿ. ದಿನವಿಡೀ ಅದೇ ನೀರನ್ನು ಕುಡಿಯಿರಿ. ಇದರಿಂದ ದಿನವಿಡೀ ನೀವು ಫ್ರೆಶ್ ಆಗಿರುವಿರಿ.
ಪುದೀನಾದಲ್ಲಿ ಕಬ್ಬಿಣಾಂಶ ಸಾಕಷ್ಟಿದ್ದು ಹಿಮೋಗ್ಲೋಬಿನ್ ಹೆಚ್ಚಳಕ್ಕೂ ಇದು ನೆರವಾಗುತ್ತದೆ ಎನ್ನಲಾಗಿದೆ. ಜೀರ್ಣಕ್ರಿಯೆಗೆ ಸಹಾಯ ಮಾಡುವ ಪುದೀನಾದಲ್ಲಿ ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿದ್ದು ಹೊಟ್ಟೆಯ ಸಮಸ್ಯೆಗಳನ್ನೂ ಇದು ದೂರ ಮಾಡುತ್ತದೆ.
ಇದರ ಗಾಳಿಯ ಸೇವನೆಯಿಂದ ಶ್ವಾಸಕೋಶ ಸಂಬಂಧಿ ಸಮಸ್ಯೆಗಳೂ ದೂರವಾಗುತ್ತದೆ. ಮೂಗು ಬ್ಲಾಕ್ ಆದ ಸಂದರ್ಭದಲ್ಲಿ ಇದನ್ನು ಸೇರಿಸಿದ ಬಿಸಿನೀರಿನ ಸ್ಟೀಮ್ ತೆಗೆದುಕೊಳ್ಳುವುದು ಒಳ್ಳೆಯದು.
ಪುದೀನಾ ರಸವನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ತಲೆನೋವು ದೂರವಾಗುತ್ತದೆ. ಅದೇ ಕಾರಣಕ್ಕೆ ನಾವು ಹಚ್ಚಿಕೊಳ್ಳುವ ಹಲವು ಬಾಮ್ ಗಳಲ್ಲಿ ಪುದೀನಾವನ್ನೂ ಬಳಸಿರುತ್ತಾರೆ. ಮಾನಸಿಕ ಖಿನ್ನತೆಯನ್ನು ಕಡಿಮೆ ಮಾಡುವ ಗುಣವೂ ಪುದೀನಾಗಿದೆ.