ಮಾರುಕಟ್ಟೆಯಿಂದ ತಂದ ಪುದೀನಾ ಎರಡೇ ದಿನದಲ್ಲಿ ಬಾಡಿ ಹೋಗುತ್ತದೆ. ಫ್ರಿಡ್ಜ್ ನಲ್ಲಿಟ್ಟರೂ ಉಪಯೋಗವಿಲ್ಲ. ಪುದೀನಾ ಕಟ್ಟು ಬಾಡಿಹೋಗದಂತೆ ತಾಜಾವಾಗಿಟ್ಟುಕೊಳ್ಳುವ ವಿಧಾನ ಇಲ್ಲಿದೆ ನೋಡಿ.
ಮಾರುಕಟ್ಟೆಯಿಂದ ತರುವಾಗ ಸಾಧ್ಯವಾದಷ್ಟು ತಾಜಾ ಪುದೀನಾ ಕಟ್ಟುಗಳನ್ನು ಮನೆಗೆ ತಗೆದುಕೊಂಡು ಬನ್ನಿ. ಬಾಡಿದ ಸೊಪ್ಪು ತಂದರೆ ಬೇಗನೆ ಹಾಳಾಗುವ ಸಾಧ್ಯತೆ ಇದೆ. ಹಾಗೇ ತಂದ ಪುದೀನಾ ಕಟ್ಟುಗಳನ್ನು ಬಿಡಿಸಿ ಅದರ ದಂಟಿನಿಂದ ಎಲೆಗಳನ್ನು ತೆಗೆದು ಒಂದು ಪ್ಲೇಟ್ ಗೆ ಹಾಕಿಕೊಳ್ಳಿ.
ನಂತರ ಒಂದು ಸೋಸುವ ಪಾತ್ರೆಗೆ ಇದನ್ನು ಹಾಕಿಕೊಂಡು ನಿಧಾನಕ್ಕೆ ತೊಳೆಯಿರಿ. ತೊಳೆದ ಪುದೀನಾ ಎಲೆಗಳನ್ನು ಒಂದು ಕಿಚನ್ ಟವಲ್ ಮೇಲೆ ಹಾಕಿ ಅದರಲ್ಲಿರುವ ನೀರಿನ ಪಸೆಯನ್ನು ಆರಿಸಿಕೊಳ್ಳಿ.
ನಂತರ ಒಂದು ಡಬ್ಬಕ್ಕೆ ಟಿಶ್ಯೂ ಪೇಪರ್ ಹಾಕಿಕೊಂಡು ಅದರ ಮೇಲೆ ಈ ಎಲೆಗಳನ್ನು ಹಾಕಿ ಮುಚ್ಚಳ ಮುಚ್ಚಿ ಫ್ರಿಡ್ಜ್ ಲ್ಲಿಟ್ಟರೆ ತಿಂಗಳುಗಟ್ಟೆಲೆ ಪುದೀನಾ ಎಲೆ ಹಾಳಾಗದಂತೆ ತಡೆಯಬಹುದು.