ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವು ಸಾಕಷ್ಟು ಮುಂದುವರೆದಿದೆ. ಇದು ಕೇಳುವ ಮತ್ತು ನೋಡುವ ವಿಧಾನವನ್ನು ಬದಲಾಯಿಸಿದೆ. ಬಹಳ ಹತ್ತಿರವಾದ ಅನುಭವಗಳನ್ನು ನೀಡುವ ಮೂಲಕ ಜನರಿಗೆ ವಾಸ್ತವವನ್ನು ಬದಲಾಯಿಸಿದೆ. ಹಾಗೆಯೇ ಪ್ರತಿಯೊಬ್ಬರ ಪ್ರೀತಿ ಪಾತ್ರರ ನೆನಪುಗಳನ್ನು ಜೀವಂತವಾಗಿಡಲು ಹಲವಾರು ಮಾರ್ಗಗಳಿವೆ. ಅವುಗಳಲ್ಲಿ ಧ್ವನಿಯೂ ಒಂದು.
ಹೌದು, ವ್ಯಕ್ತಿಯೊಬ್ಬರಿಗೆ ಸಿಕ್ಕ ಅದ್ಭುತ ಕ್ರಿಸ್ಮಸ್ ಉಡುಗೊರೆ ಕಂಡು ಅವರು ಕಣ್ಣೀರಾಗಿದ್ದಾರೆ. ತನ್ನ ಮಡಿದ ತಾಯಿಯ ಧ್ವನಿಮುದ್ರಣವನ್ನು ಪ್ಲೇ ಮಾಡಬಹುದಾದ ಆಟಿಕೆ ಕರಡಿಯನ್ನು ಸ್ವೀಕರಿಸಿದ ವ್ಯಕ್ತಿ ಆನಂದಭಾಷ್ಪ ಹರಿಸಿದ್ದಾರೆ.
ಈ ಅದ್ಭುತ ಉಡುಗೊರೆಯನ್ನು ವ್ಯಕ್ತಿಗೆ ಅವರ ಪುತ್ರಿ ನೀಡಿದ್ದಾರೆ. ಧ್ವನಿಯನ್ನು ನುಡಿಸಬಲ್ಲ ಕಸ್ಟಮೈಸ್ ಟೆಡ್ಡಿಯನ್ನು ಖರೀದಿಸಿದ ಪುತ್ರಿ ತಂದೆಗೆ ಉಡುಗೊರೆಯಾಗಿ ನೀಡಿದ್ದಾಳೆ. ಆ ಕ್ಷಣವನ್ನು ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾಳೆ.
ಪುತ್ರಿ ಕೊಟ್ಟ ಸರ್ಪೈಸ್ ಉಡುಗೊರೆಯನ್ನು ತಂದೆ ತೆರೆದು ನೋಡಿದಾಗ, ಆಟಿಕೆ ಕರಡಿ ಗಿಫ್ಟ್ ನೀಡಲಾಗಿದ್ದು. ಅದನ್ನು ಅವರು ಪ್ರೆಸ್ ಮಾಡಿದಾಗ, ತನ್ನ ದಿವಂಗತ ತಾಯಿಯ ಧ್ವನಿಯಲ್ಲಿ ಹಲೋ ಡಾರ್ಲಿಂಗ್ ಎಂದು ಹೇಳಿದೆ. ತನ್ನ ಮಡಿದ ತಾಯಿಯ ಧ್ವನಿಯನ್ನು ಕೇಳುತ್ತಲೇ ಅವರು ಗದ್ಗತಿರಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರನ್ನು ಕೂಡ ಭಾವುಕರನ್ನಾಗಿಸಿದೆ.