ಪುಣೆ ಹಾಗೂ ಮುಂಬೈನ ಈ ಸ್ಥಳಗಳಲ್ಲಿ ನಡೆಯಲಿದೆ ಐಪಿಎಲ್ ಪಂದ್ಯ; ಮೇ 29ರಂದು ಫೈನಲ್ ಕದನ 25-02-2022 4:41PM IST / No Comments / Posted In: Latest News, Live News, Sports 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನ್ನು ಮುಂಬೈ ಮತ್ತು ಪುಣೆಯ ನಾಲ್ಕು ಸ್ಥಳಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ವರ್ಷದ ಐಪಿಎಲ್ ಫೈನಲ್ ಪಂದ್ಯ ಮೇ 29ರಂದು ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕೃತ ಮಾಹಿತಿಯನ್ನು ನೀಡಿದೆ. ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಮಾರ್ಚ್ 26ರಿಂದ ಐಪಿಎಲ್ ಪಂದ್ಯವು ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದರು. ಈ ಬಾರಿ ಐಪಿಎಲ್ನಲ್ಲಿ ಎರಡು ಹೊಸ ತಂಡಗಳಾದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟನ್ಸ್ ಸೇರ್ಪಡೆಯಾಗಿದೆ. ಈ ಸಂಬಂಧ ಗುರುವಾರದಂದು ಸಭೆ ಕರೆದಿದ್ದ ಐಪಿಎಲ್ ಆಡಳಿತ ಮಂಡಳಿಯು ಟಾಟಾ ಐಪಿಎಲ್ 2022ಕ್ಕೆ ಸಂಬಂಧಿಸಿದಂತೆ ಅನೇಕ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಕೋವಿಡ್ 19 ಸೋಂಕನ್ನು ಗಮನದಲ್ಲಿಟ್ಟುಕೊಂಡು ಇಂಡಿಯನ್ ಪ್ರೀಮಿಯರ್ ಲೀಗ್ನ 15ನೇ ಆವೃತ್ತಿಯು ಬಯೋ ಸೆಕ್ಯೂರ್ ಪರಿಸರದಲ್ಲಿ ಆಡಲಿಸಲಾಗುತ್ತದೆ ಎಂದು ಹೇಳಿದೆ. ಪಂದ್ಯಾವಳಿಯು ಮಾರ್ಚ್ 26ರಿಂದ ಆರಂಭಗೊಳ್ಳಲಿದೆ. ಹಾಗೂ ಮೇ 29ರಂದು ಅಂತಿಮ ಪಂದ್ಯವು ಇರಲಿದೆ. ಒಟ್ಟು 70 ಲೀಗ್ಗಳು ಇರಲಿದ್ದು ಮುಂಬೈ ಹಾಗೂ ಪುಣೆ ನಾಲ್ಕು ಅಂತಾರಾಷ್ಟ್ರೀಯ ಗುಣಮಟ್ಟದ ಮೈದಾನಗಳಲ್ಲಿ ಆಡಲಾಗುತ್ತದೆ. ಫ್ಲೇ ಆಫ್ ಸ್ಥಳಗಳನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಬಿಸಿಸಿಐ ಅಧಿಕೃತ ಪ್ರಕಟಣೆ ನೀಡಿದೆ. ಮುಂವೈನ ವಾಂಖೆಡೆ ಸ್ಟೇಡಿಯಂ ಹಾಗೂ ಡಿವೈ ಪಾಟೀಲ್ ಸ್ಟೇಡಿಯಂ ತಲಾ 20 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಮುಂಬೈನ ಬ್ರಬೋರ್ನ್ ಸ್ಟೇಡಿಯಂ ಹಾಗೂ ಪುಣೆಯ ಎಂಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ತಲಾ 15 ಪಂದ್ಯಗಳು ನಡೆಯಲಿವೆ. ಪ್ರತಿಯೊಂದು ಐಪಿಎಲ್ ತಂಡವು ತಲಾ ನಾಲ್ಕು ಪಂದ್ಯಗಳನ್ನು ವಾಂಖೆಡೆ ಹಾಗೂ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಆಡಲಿವೆ. ತಲಾ ಮೂರು ಪಂದ್ಯಗಳನ್ನು ಬ್ರಬೋರ್ನ್ ಸ್ಟೇಡಿಯಂ ಹಾಗೂ ಪುಣೆಯ ಎಂಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಆಡಲಿದೆ. 10 ತಂಡಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಗ್ರೂಪ್ ಎ : ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್, ದೆಹಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಗ್ರೂಪ್ ಬಿ : ಚೆನ್ನೈ ಸೂಪರ್ ಕಿಂಗ್ಸ್, ಸನ್ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್