alex Certify ಪುಣೆಯಲ್ಲೂ ಸ್ಥಾಪನೆಯಾಯ್ತು ಡಿಜಿಟಲ್​ ಜನಸಂಖ್ಯಾ ಗಡಿಯಾರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಣೆಯಲ್ಲೂ ಸ್ಥಾಪನೆಯಾಯ್ತು ಡಿಜಿಟಲ್​ ಜನಸಂಖ್ಯಾ ಗಡಿಯಾರ..!

ಪುಣೆಯಲ್ಲಿ ಇಂದು ಮೊದಲ ಡಿಜಿಟಲ್ ಜನಸಂಖ್ಯಾ ಗಡಿಯಾರವನ್ನು ಸ್ಥಾಪಿಸಲಾಗಿದ್ದು ಇದು ಮಹಾರಾಷ್ಟ್ರ ಪ್ರಸ್ತುತ ಜನಸಂಖ್ಯೆ ಹಾಗೂ ದೇಶದ ಒಟ್ಟು ಅಂದಾಜು ಜನಸಂಖ್ಯೆಯನ್ನು ಪ್ರದರ್ಶಿಸುತ್ತದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಗೋಖಲೆ ಇನ್​ಸ್ಟಿಟ್ಯೂಟ್​ ಆಫ್​ ಪಾಲಿಟಿಕ್ಸ್​ & ಎಕಾನಾಮಿಕ್ಸ್​​ ಜಂಟಿಯಾಗಿ ಈ ಡಿಜಿಟಲ್​ ಜನಸಂಖ್ಯಾ ಗಡಿಯಾರವನ್ನು ನಿರ್ಮಿಸಿದೆ.

ಈ ಗಡಿಯಾರವನ್ನು ರಾಜ್ಯದ ಮಾಜಿ ಸಂಖ್ಯಾಶಾಸ್ತ್ರಜ್ಞ ಪ್ರವೀಣ್​ ಶ್ರೀವಾತ್ಸವ, ಮಹಾ ನಿರ್ದೇಶಕಿ (ಸಂಖ್ಯಾಶಾಸ್ತ್ರ) ಸಂಧ್ಯಾ ಕೃಷ್ಣಮೂರ್ತಿ ಹಾಗೂ ಜಿಐಪಿಇಯ ಅರ್ಥಶಾಸ್ತ್ರಜ್ಞ ಹಾಗೂ ಕುಲಪತಿ ಡಾ. ಅಜಿತ್​ ರಾನಡೆ ಲೋಕಾರ್ಪಣೆಗೊಳಿಸಿದರು.

ಇದು ಮಹಾರಾಷ್ಟ್ರದಲ್ಲಿ ಸ್ಥಾಪನೆಯಾದ 2 ನೇ ಜನಸಂಖ್ಯಾ ಗಡಿಯಾರವಾಗಿದೆ, ಇದು ದೇಶದ 16 ರಾಜ್ಯಗಳಾದ್ಯಂತ ವಿವಿಧ ಜನಸಂಖ್ಯಾ ಸಂಶೋಧನೆಗಳ ಕಾರ್ಯಾಚರಣೆಗೆ ನಿರ್ಮಿಸಬೇಕಾಗಿರುವ 18 ಗಡಿಯಾರಗಳಲ್ಲಿ ಒಂದಾಗಿದೆ. ದೇಶದಲ್ಲಿ ಪ್ರಸ್ತುತ ಇಂತಹ ನಾಲ್ಕು ಗಡಿಯಾರಗಳು ಕಾರ್ಯನಿರ್ವಹಿಸುತ್ತಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...